ಬೆಂಗಳೂರು, ಜು 23 (DaijiworldNews/PY): ಗಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ವಿಚಾರದ ಬಗ್ಗೆ ಮೈಕ್ರೋಬ್ಲಾಗಿಂಗ್ ಫ್ಲಾಟ್ ಫಾರ್ಮ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋಗಳ ಮೇಲೆ ದಾಖಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ವಿರುದ್ಧ ಉತ್ತರಪ್ರದೇಶ ಪೊಲೀಸರು ನೀಡಿದ ನೋಟಿಸ್ ಅನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, "ಮನೀಶ್ ಮಹೇಶ್ವರಿ ಅವರನ್ನು ಉತ್ತರಪ್ರದೇಶ ಪೊಲೀಸರು ಪ್ರಶ್ನಿಸುವ ಅಗತ್ಯವಿದ್ದರೆ, ಅವರು ಅವರ ಕಚೇರಿ ವಿಳಾಸದಲ್ಲಿ ಅಥವಾ ವಾಸ್ತವವಾಗಿ ಕೂಡಾ ಮಾಡಬಹುದು" ಎಂದು ನ್ಯಾಯಾಲಯ ತಿಳಿಸಿದೆ.
"ಪ್ರಾಥಮಿಕ ತನಿಖೆಯನ್ನು ಆಶ್ರಯಿಸಲು ಹಾಗೂ ಸಾರ್ವಜನಿಕ ಡೊಮೇನ್ನಲ್ಲಿರುವ ದಾಖಲೆಗಳನ್ನು ಸುರಕ್ಷಿತಗೊಳಿಸಲು ಪೊಲೀಸರ ವಿಧಾನವನ್ನು ಸಹ ಮಾಡಿಲ್ಲ. ನ್ಯಾಯಲಯವನ್ನು ಅದು ಬೇರೆ ರೀತಿಯಲ್ಲಿ ಊಹಿಸಲು ಒತ್ತಾಯಿಸಲಾಗುತ್ತದೆ" ಎಂದು ಹೈಕೋರ್ಟ್ ಹೇಳಿದೆ.
ಈ ಹಿಂದೆ ಕೋಮು ಸೂಕ್ಷ್ಮ ವಿಡಿಯೋವನ್ನು ವೇದಿಕೆಯಲ್ಲಿ ಅಪ್ಲೋಡ್ ಮಾಡಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುಪಿ ಪೊಲೀಸರು, ತನ್ನ ದೈಹಿಕ ಉಪಸ್ಥಿತಿಯನ್ನು ಕೋರೊ ಹೊರಡಿಸಿದ್ದ ನೋಟಿಸ್ ಅನ್ನು ರದ್ದುಗೊಳಿಸುಂತೆ ಮನೀಶ್ ಮಹೇಶ್ವರಿ ಕೋರಿದ್ದರು.
ಮನೀಶ್ ಮಹೇಶ್ವರಿ ಪರವಾಗಿ ನ್ಯಾ. ಜಿ. ನರೇಂದರ್ ಅವರ ಏಕಸದಸ್ಯ ಪೀಠದ ಮುಂದೆ ಹಾಜರಾದ ವಕೀಲ ಸಿ.ವಿ.ನಾಗೇಶ್ ಅವರು, "ಸಿಆರ್ ಪಿಸಿಯ ಸೆಕ್ಷನ್ 41-ಎ ಅಡಿಯಲ್ಲಿ ಕಾನೂನು ವ್ಯಾಪ್ತಿ ಇಲ್ಲದೆ, ಕಾನೂನಿನ ಅನುಮತಿಯಿಲ್ಲದೆ ನೋಟಿಸ್ ನೀಡಲಾಗಿದೆ" ಎಂದು ವಾದಿಸಿದ್ದರು.