ಚಿತ್ರದುರ್ಗ, ಜು.23 (DaijiworldNews/HR): ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲಿಯವರೆಗೆ ಎಷ್ಟು ಮಂದಿ ದಲಿತರನ್ನ ಸಿಎಂ ಮಾಡಿದ್ದಾರೆ. ಸ್ವತಂತ್ರ ಬಂದು ಇಷ್ಟು ವರ್ಷ ಆಡಳಿತ ನಡೆಸಿದ್ದಾರೆ. ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಅವರಿಗೆ ಬಿಜೆಪಿಗೆ ಸವಾಲ್ ಹಾಕುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕರ್ನಾಟಕದಲ್ಲಿ ಕಾಂಗ್ರೆಸ್ನವರು ದಲಿತರನ್ನ ಸಿಎಂ ಮಾಡಲು ಆಗಿಲ್ಲ ತುಳಿದಿದ್ದೇವೆ ಎಂದು ಒಪ್ಪಿಕೊಳ್ಳಲಿ ಸಿದ್ದರಾಮಯ್ಯ. ನಾವು ತುಳಿದಿದ್ದೇವೆ, ನೀವು ಉದ್ದಾರ ಮಾಡಿ ಎಂದರೆ ಬೆಲೆ ಇದೆ. ಮುಂದೆಯೂ ನಾನೇ ಸಿಎಂ ಎಂದು ಹೇಳುವ ನಿಮಗೆ ಕಟೀಲ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗೇನಿದೆ? ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಅವರು ದಲಿತರನ್ನ ಸಿಎಂ ಮಾಡಲ್ಲ" ಎಂದಿದ್ದಾರೆ.
ಇನ್ನು "ಒಂದು ಕಡೆ ಡಿಕೆ ಶಿವಕುಮಾರ್ ಅಭಿಮಾನಿಗಳ ಮೂಲಕ ಘೋಷಣೆ ಹಾಕಿಸುತ್ತಿದ್ದು, ಇಂಥವರಿಗೆ ಬಿಜೆಪಿ ಬಗ್ಗೆ ಸವಾಲ್ ಹಾಕಲು ಯೋಗ್ಯತೆ ಇದ್ಯಾ ಇವರು ಅಯೋಗ್ಯರು. ದಲಿತ ರಾಷ್ಟ್ರ ಪತಿ ಮಾಡಿದ್ದು ನಮ್ಮ ಬಿಜೆಪಿ. ದಲಿತರನ್ನ ರಾಷ್ಟ್ರದಲ್ಲಿ ಎಷ್ಟು ಮಂದಿ ನಾವು ಮುಖ್ಯಮಂತ್ರಿ ಮಾಡಿದ್ದೇವೆ. ರಾಜ್ಯದಲ್ಲಿರುವ ರಾಜ್ಯಪಾಲರು ಯಾರು ಅವರು ದಲಿತರು. ಬಿಜೆಪಿ ರಾಷ್ಟ್ರ ಭಕ್ತಿ ಇರುವವರನ್ನ ಮಾಡುತ್ತೇವೆ, ಜಾತಿ ನೋಡಿಯಲ್ಲ" ಎಂದು ತಿರುಗೇಟು ನೀಡಿದ್ದಾರೆ.