ನವದೆಹಲಿ,ಜು.23 (DaijiworldNews/HR): ಈ ಬಾರಿಯ 10 ನೇ ತರಗತಿ (ಐಸಿಎಸ್ಇ) ಮತ್ತು 12 ನೇ ತರಗತಿ (ಐಎಸ್ಸಿ) ಪರೀಕ್ಷೆಗಳ ಫಲಿತಾಂಶಗಳನ್ನು ಜುಲೈ 24ರ ಶನಿವಾರ ಸಂಜೆ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.
ಐಸಿಎಸ್ಇ ಮತ್ತು ಐಎಸ್ಸಿ ವರ್ಷ 2021 ಪರೀಕ್ಷೆಗಳ ಫಲಿತಾಂಶಗಳು ಪರಿಷತ್ತಿನ ವೆಬ್ಸೈಟ್ನಲ್ಲಿ ಮತ್ತು ಎಸ್ಎಂಎಸ್ ಮೂಲಕ ಲಭ್ಯವಾಗಲಿದ್ದು, ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಶಾಲೆಗಳು ಕೌನ್ಸಿಲ್ನ ಕೆರಿಯರ್ಸ್(CAREERS) ಪೋರ್ಟಲ್ಗೆ ಲಾಗ್ಇನ್ ಮಾಡುವ ಮೂಲಕ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಕೆರಿಯರ್ಸ್(CAREERS) ಪೋರ್ಟಲ್ಗೆ ಲಾಗ್ಇನ್ ಮಾಡುವಾಗ ಸಂದೇಹವಿದ್ದಲ್ಲಿ ಶಾಲೆಗಳು CISCEhelpdesk@orioninc.corn ನಲ್ಲಿ CISCE ಸಹಾಯವಾಣಿಯನ್ನು ಸಂಪರ್ಕಿಸಬಹುದು ಅಥವಾ 1800-267-1760 ಗೆ ಕರೆ ಮಾಡಬಹುದು.
ಇನ್ನು ಕೌನ್ಸಿಲ್ನ ವೆಬ್ಸೈಟ್ - www.cisce.org ಅಥವಾ www.results.cisce.org ಗೆ ಭೇಟಿ ನೀಡುವ ಮೂಲಕ ವೈಯಕ್ತಿಕ ಅಭ್ಯರ್ಥಿಗಳು ಫಲಿತಾಂಶಗಳನ್ನು ನೋಡಬಹುದಾಗಿದೆ.