ನವದೆಹಲಿ,ಜು.23 (DaijiworldNews/HR): ಇಸ್ರೇಲಿ ಸಾಫ್ಟ್ ವೇರ್ ಪೆಗಾಸಸ್ ಬಳಸಿ ದೇಶದಲ್ಲಿ 400 ಮಂದಿಯ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯ ಕುರಿತು ಲೋಕಸಭೆಯಲ್ಲಿ ಗದ್ದಲವನ್ನು ಸೃಷ್ಟಿಸಿದ್ದು, ಜುಲೈ.26ಕ್ಕೆ ಕಲಾಪವನ್ನು ಮುಂದೂಡಲಾಗಿದೆ.
ಸಾಂಧರ್ಭಿಕ ಚಿತ್ರ
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ರಿಂದ ಆರಂಭವಾಗಿದ್ದು, 3 ದಿನಗಳ ಅಧಿವೇಶನ ಕೂಡ ಗದ್ದಲ ಗಲಾಟೆಗೆ ಬಲಿಯಾಗಿದ್ದು, ಈ ಅಧಿವೇಶನ ಆಗಸ್ಟ್ 13ರವರೆಗೂ ನಡೆಯಲಿದೆ.
ಇನ್ನು ಇಂಧನ ಬೆಲೆ ಏರಿಕೆ, ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಗಿಂತ ಪೆಗಾಸಸ್ ಬೇಹುಗಾರಿ ವಿಷಯ ಉಭಯ ಸದನಗಳಲ್ಲಿ ಸದ್ದು ಗದ್ದಲಕ್ಕೆ ಕಾರಣವಾಗಿದೆ.