ಜೈಪುರ, ಜು 23 (DaijiworldNews/MS): ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಕುರಿತ ಪ್ರತಿಭಟನೆ ವೇಳೆ ರಾಜಸ್ತಾನ ಕಾಂಗ್ರೆಸ್ ಶಾಸಕ ಗಣೇಶ್ ಘೋಗ್ರಾ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ , ಅಸಂಸದೀಯ ಪದ ಬಳಸಿ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷವೂ ,ರಾಜ್ ಭವನದಲ್ಲಿ ನಡೆಸಿದ ಪ್ರತಿಭಟನೆ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಶೂಗಳಿಂದ ಹೊಡೆಯಬೇಕು ಎಂದು ಅಸಂಬದ್ದವಾಗಿ ಮಾತನಾಡಿದರು. ಮಾತ್ರವಲ್ಲದೆ ಘೋಗ್ರಾ ಅವರು ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಬಿಜೆಪಿಯ ‘ದಲ್ಲಾಳಿ ’ ಎಂದು ಆರೋಪಿಸಿದರು.
ಮೋದಿ ಮತ್ತು ಅಮಿತ್ ಶಾ ಕುಖ್ಯಾತ ಕ್ರಿಮಿನಲ್ ಜೋಡಿಗಳಾಗಿದ್ದು, ಹಣದುಬ್ಬರವು ಸಾರ್ವಕಾಲಿಕ ಎತ್ತರದಲ್ಲಿದೆ ಇಉ ಜನಸಾಮಾನ್ಯರ ಬೆನ್ನನ್ನು ಮುರಿದಿದೆ. ಮೋದಿ ಮತ್ತು ಷಾ ನಮ್ಮ ದೇಶವನ್ನು ಗುಲಾಮರನ್ನಾಗಿ ಮಾಡಲು ಬಯಸುತ್ತಿದ್ದಾರೆ. ಈಗ, ನಮ್ಮ ವೈಯಕ್ತಿಕ ಮಾತುಕತೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ ಹೀಗಾಗಿ ಅವರನ್ನು ಶೂಗಳಿಂದ ಹೊಡೆಯಬೇಕು ಎಂದು ಕೆಟ್ಟ ಪದ ಬಳಸಿದರು.’
ಅಮಿತ್ ಶಾ ಅವರ ರಾಜೀನಾಮೆ ಮತ್ತು ಪೆಗಾಸಸ್ ಬೇಹುಗಾರಿಕೆ ವಿವಾದದ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ, ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಕಾಂಗ್ರೆಸ್ ಶಾಸಕರ ಹೇಳಿಕೆ ನೀಡಿದ ಕೂಡಲೇ ಬಿಜೆಪಿ ಮುಖಂಡರು ಅಶೋಕ್ ನಗರ ಪೊಲೀಸ್ ಠಾಣೆಗೆ ಡುಂಗರ್ಪುರ ಶಾಸಕ ಗಣೇಶ್ ಘೋಗ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.