ನವದೆಹಲಿ, ಜು.23 (DaijiworldNews/HR): ಭಾರತ್ ಬಯೋಟೆಕ್ ಸಂಸ್ಥೆಯು ಮುಂದಿನ ವಾರ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಾಂಧರ್ಭಿಕ ಚಿತ್ರ
ಈಗಾಗಲೇ ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಎರಡನೇ ಡೋಸ್ ನ ಪ್ರಯೋಗ ಮಾಡಲಾಗಿದೆ.
ಇನ್ನು ದೆಹಲಿಯ ಏಮ್ಸ್ ಲಸಿಕಾ ಪ್ರಯೋಗ ಕೇಂದ್ರದಲ್ಲಿ ಈಗಾಗಲೇ 18 ವರ್ಷದ ಒಳಗಿನವರಿಗೆ ಲಸಿಕೆ ಪ್ರಯೋಗವನ್ನು ಮಾಡಲಾಗಿದ್ದು, ಈ ಪ್ರಯೋಗಾತ್ಮಕ ಪರೀಕ್ಷೆಯ ಎಲ್ಲಾ ಫಲಿತಾಂಶವು ಎಲ್ಲಾ ವರ್ಷದ ಗುಂಪಿನ ಪ್ರಯೋಗಳು ಮುಗಿದು ಒಂದು ತಿಂಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ವರದಿಯಾಗಿದೆ.
12 ರಿಂದ 18, 6 ರಿಂದ 12 ಹಾಗೂ 2 ರಿಂದ 6 ವರ್ಷಗಳ ಮೂರು ಗುಂಪುಗಳಿಗೆ ಲಸಿಕಾ ಪ್ರಯೋಗಾತ್ಮಕ ಪರೀಕ್ಷೆಗಳನ್ನು ಮಾಡಲಾಗಿದ್ದು, ಸದ್ಯ 2 ರಿಂದ 6 ವರ್ಷದ ಮಕ್ಕಳಿಗೆ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಯೋಗಕ್ಕೆ ಮುಂದಾಗಿದೆ.