ಚಿತ್ರದುರ್ಗ, ಜು 23 (DaijiworldNews/PY): "ರಾಷ್ಟ್ರೀಯ ನಾಯಕರ ಆದೇಶವನ್ನು ಪಾಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಜುಲೈ 25ಕ್ಕೆ ಬರುವ ಸೂಚನೆಯನ್ನು 26ಕ್ಕೆ ಪಾಲಿಸುವುದಾಗಿ ಸಿಎಂ ತಿಳಿಸಿದ್ದಾರೆ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, "ಸಿಎಂ ಬದಲಾವಣೆ ವಿಚಾರದ ಬಗ್ಗೆ ಯಡಿಯೂರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಅವರು ರಾಷ್ಟ್ರೀಯ ನಾಯಕರ ಆದೇಶವನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಸಿಎಂ ಅವರ ಹೇಳಿಕೆಯನ್ನು ರಾಜ್ಯ ಬಿಜೆಪಿ ಕಾರ್ಯಕರ್ತರು ಮೆಚ್ಚಿಕೊಂಡಿದ್ದಾರೆ" ಎಂದಿದ್ದಾರೆ.
"ಮುಖ್ಯಮಂತ್ರಿ ಸ್ಥಾನಕ್ಕೆ ನಮ್ಮ ಹೆಸರನ್ನು ಅಭಿಮಾನಿಗಳು ಹೇಳುತ್ತಿರುತ್ತಾರೆ. ಬೇಡ ಎಂದರೂ ಅಭಿಮಾನಿಗಳು ಕೇಳುವುದಿಲ್ಲ. ಈ ಬಗ್ಗೆ ಎಲ್ಲಾ ಶಾಸಕರ ಅಭಿಪ್ರಾಯ ತಿಳಿದುಕೊಂಡ ಕೇಂದ್ರದಿಂದ ಮುಖ್ಯಮಂತ್ರಿ ಆಯ್ಕೆ" ಎಂದು ತಿಳಿಸಿದ್ದಾರೆ.
ಪರೀಕ್ಷೆ ಬರೆದು ಪಾಸಾಗಿದ್ದೇವೆ ಎಂದ ಸಚಿವ ಯೋಗೀಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅದೆಲ್ಲಾ ಹಳೇ ಓಬಿರಾಯನ ಕಥೆ ಎನ್ನುತ್ತಾರಲ್ಲ ಆ ರೀತಿ. ಯತ್ನಾಳ್, ಬೆಲ್ಲದ್, ಯೋಗೀಶ್ವರ್ ಹೀಗೆ ಹೇಳೋದೆಲ್ಲಾ ಮುಗೀತು. ಈಗ ಬಿಎಸ್ವೈ ಹಾಗೂ ರಾಷ್ಟ್ರೀಯ ನಾಯಕರ ಮಾತುಗಳು ಮಾತ್ರ ಉಳಿದಿರುವುದು. ಅದು ಬಿಟ್ಟು ಇನ್ನು ಯಾರ ಮಾಡತಿಗೂ ಬೆಲೆ ಇಲ್ಲ" ಎಂದಿದ್ದಾರೆ.
"ಪಕ್ಷ ಸೂಚಿಸಿದ ದಿಕ್ಕಿನಲ್ಲಿ ಬಾರದೇ ಇದ್ದಲ್ಲಿ ಅನುಭವಿಸಬೇಕಾಗುತ್ತದೆ" ಎಂದು ತಿರುಗೇಟು ನೀಡಿದ್ದಾರೆ.