ಜಮ್ಮು, ಜು.23 (DaijiworldNews/HR): ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೆಕ್ಸಾಕಾಪ್ಟರ್ ಡ್ರೋನ್ ಒಂದನ್ನು ಹೊಡೆದುರುಳಿಸಿದ್ದು, ಡ್ರೋನ್ ಅಂತರರಾಷ್ಟ್ರೀಯ ಗಡಿಗಳ ಒಳಗೆ 8 ಕಿ.ಮೀ. ನಲ್ಲಿ ಹೊಡೆದುರುಳಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿ ಡ್ರೋನ್ ಒಂದನ್ನು ಹೊಡೆದುರುಳಿಸಿದ್ದು ಪೊಲೀಸರು 5 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಂಡಿದ್ದು, ಅದನ್ನು ಒಟ್ಟುಗೂಡಿಸಿ, ಭಯೋತ್ಪಾದಕರು ಬಳಕೆ ಮಾಡಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ ಇಟಿ) ಡ್ರೋನ್ ಚಟುವಟಿಕೆಯ ಹಿಂದೆ ಇದೆಯೇ ಮತ್ತು ಹಿಂದಿನ ಪ್ರಕರಣಗಳಂತೆ ಭಯೋತ್ಪಾದಕ ದಾಳಿಗೆ ಈ ಕಾರ್ಯವಿಧಾನವನ್ನು ಬಳಸುತ್ತಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಜೂನ್ 27 ರಂದು ಜಮ್ಮು ವಾಯುನೆಲೆಯಲ್ಲಿ ನಡೆದ ಅವಳಿ ಸ್ಫೋಟದ ಬಳಿಕ ಕಳೆದ ಒಂದು ತಿಂಗಳಲ್ಲಿ ಜಮ್ಮುವಿನ ಅನೇಕ ಸ್ಥಳಗಳಲ್ಲಿ ಹಲವಾರು ಡ್ರೋನ್ ಗಳು ಕಂಡುಬಂದಿದ್ದು, ಡ್ರೋನ್ ದಾಳಿಯ ಬೆದರಿಕೆಯನ್ನು ಹೆಚ್ಚಿಸಿದೆ.