ಚಿಕ್ಕಬಳ್ಳಾಪುರ, ಜು 23 (DaijiworldNews/PY): "ಸಿಎಂ ಬದಲಾವಣೆಗೆ ಬಗ್ಗೆ ಫಲಿತಾಂಶ ಬಂದಾಯ್ತಲ್ಲ" ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಹೇಳಿದ್ದಾರೆ.
ತಾಲ್ಲೂಕಿನ ನಂದಿಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಸಂಬಂಧ ಸ್ಥಳ ಪರಿಶೀಲನೆಗೆ ಬಂದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬದಲಾವಣೆ ವಿಚಾರವಾಗಿ ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಈ ಬಗ್ಗೆ ನನಗೇನು ತಿಳಿದಿಲ್ಲ. ಆದರೆ, ಅಂತಿಮವಾಗಿ ಫಲಿತಾಂಶ ಬಂದಿದೆಯಲ್ಲ" ಎಂದಿದ್ದಾರೆ.
ಯಡಿಯೂರಪ್ಪ ಅವರ ಬದಲಾವಣೆಗೆ ಪರೀಕ್ಷೆ ಬರೆದವರು ನೀವು ಎಂದು ಕೇಳಿದ ಪ್ರಶ್ನಗೆ ಪ್ರತಿಕ್ರಿಯೆ ನೀಡಿದ ಅವರು, "ಫಲಿತಾಂಶ ಬಂದಾಯ್ತಲ್ಲ" ಎಂದು ಹೇಳಿದ್ದಾರೆ.
"ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬೇಕಾದಾಗ ಯಡಿಯೂರಪ್ಪ ಅವನ್ನು ಭೇಟಿ ಮಾಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಬಳಿಕ ಯಡಿಯೂರಪ್ಪ ಅವರನ್ನು ದೂಷಿಸುತ್ತಾರೆ" ಎಂದಿದ್ದಾರೆ.
ಈ ವೇಳೆ ಸಿಎಂ ಬದಲಾವಣೆ ಹಾಗೂ ರಾಜ್ಯ ರಾಜಕೀಯ ವಿದ್ಯಾಮಾನಗಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.