ಬೆಂಗಳೂರು, ಜು 22 (DaijiworldNews/MS): ಹೈಕಮಾಂಡ್ ನಿಂದ ಜು. 25 ರಂದು ಸಂದೇಶ ಬರಬಹುದು , ಅವರು ಯಾವಾಗ ರಾಜೀನಾಮೆ ನೀಡಲು ಸೂಚಿಸುತ್ತಾರೆಯೋ ಅಂದು ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ನಿಂದ ನನಗೆ ಇನ್ನೂ ಅಧಿಕೃತ ಸೂಚನೆ ಬಂದಿಲ್ಲ. 25ರ ಬಳಿಕ ಬರುವ ಸಂದೇಶಕ್ಕಾಗಿ ನಾನು ಕಾಯುತ್ತಿದ್ದೇನೆ. 2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ.ಅಧಿಕಾರ ಇಲ್ಲದೇ ಇದ್ದರೂ ಪಕ್ಷ ಸಂಘಟನೆಗೆ ನಾನು ದುಡಿಯುತ್ತೇನೆ. ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಹತ್ತಾರು ವರ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾರ ಸೂಚನೆಯನ್ನು ಪಾಲಿಸುತ್ತೇನೆ. ಮುಂದೆ ಯಾರನ್ನು ಸಿಎಂ ಮಾಡಬೇಕೆಂದು ನಾನು ಹೇಳುವುದಿಲ್ಲ. ಹೈಕಮಾಂಡ್ ಯಾವ ತೀರ್ಮಾನ ಬೇಕಾದರೂ ಮಾಡಲಿ. ಯಾವ ಸಮುದಾಯಕ್ಕೆ ನೀಡಬೇಕೆಂಬುದರ ಬಗ್ಗೆಯೂ ನಾನು ಮಾತಾನಾಡುವುದಿಲ್ಲ. ಯಾವುದೇ ಹೆಸರನ್ನು ನಾನು ಶಿಫಾರಸ್ಸು ಮಾಡುವುದಿಲ್ಲ ಯಾರನ್ನು ಸಿಎಂ ಮಾಡಬೇಕೆಂದು ಸಲಹೆ ನೀಡಲ್ಲ ಈಗಲೇ ಯಾಕೆ ಅವಸರದ ಮಾತು ಎಂದು ಮರು ಪ್ರಶ್ನಿಸಿದರು