ಚೆನ್ನೈ, ಜು.22 (DaijiworldNews/HR): ಮಧುರೈನ ಸುಕನ್ಯಾ ಬಿರಿಯಾನಿ ಸ್ಟಾಲ್ನ ಮಾಲೀಕರು ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಘೋಷಿಸಿರುವ ಯೋಜನೆಯೊಂದು ಭಾರೀ ಸಂಚಲನ ಸೃಷ್ಟಿಸಿದೆ.
5 ಪೈಸೆ ನಾಣ್ಯವನ್ನು ಯಾರು ತರುತ್ತಾರೋ ಅವರಿಗೆ ಉಚಿತ ಬಿರಿಯಾನಿ ನೀಡುವುದಾಗಿ ಹೊಟೇಲ್ನ ಮಾಲೀಕ ಘೋಷಣೆ ಮಾಡಿದ್ದಾರೆ.
ಹೊಟೇಲ್ನ ಮಾಲೀಕ ಘೋಷಣೆ ಮಾಡಿದ ಬಳಿಕ ನೂರಾರು ಮಂದಿ 5 ಪೈಸೆ ನಾಣ್ಯವನ್ನು ಹಿಡಿದುಕೊಂಡು ಬಿರಿಯಾನಿ ಸ್ಟಾಲ್ ಮುಂದೆ ಜಮಾಯಿಸಿದ್ದು, ಒಂದು ಹಂತದಲ್ಲಿ 300ಕ್ಕಿಂತ ಹೆಚ್ಚು ಮಂದಿ ಅಲ್ಲಿ ಸೇರಿದ್ದರು ಎಂದು ತಿಳಿದು ಬಂದಿದೆ.
ಇನ್ನು ಕೊರೊನಾ ಮಾರ್ಗಸೂಚಿಯ ಉಲ್ಲಂಘನೆ ಆಗಿದ್ದು, ಬಿರಿಯಾನಿ ಸ್ಟಾಲ್ ಮಾಲೀಕ ಬಿರಿಯಾನಿ ನೀಡುವುದನ್ನು ನಿಲ್ಲಿಸಿ ಸ್ಟಾಲ್ಗೆ ಬೀಗ ಜಡಿದಿದ್ದಾನೆ ಎನ್ನಲಾಗಿದೆ.
ಕೇವಲ ಬಿರಿಯಾನಿಗಾಗಿ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಜನರ ನಡೆಯ ಬಗ್ಗೆ ಪೊಲೀಸರು ಕೂಡ ಅಚ್ಚರಿಗೊಂಡಿದ್ದು, ಜನರ ಗುಂಪನ್ನು ಚದುರಿಸಿದ್ದಾರೆ.