ನವದೆಹಲಿ, ಜು.22 (DaijiworldNews/HR): ದೇಶದಲ್ಲಿ 24 ಗಂಟೆಗಳ ಅಂತರದಲ್ಲಿ 41,383 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ ಸೋಂಕಿಗೆ 507 ಮಂದಿ ಬಲಿಯಾಗಿದ್ದು, 38,652 ಮಂದಿ ಗುಣಮುಖರಾಗಿದ್ದು, ಕೊರೊನಾ ಚೇತರಿಕೆ ಪ್ರಮಾಣಕ್ಕಿಂತ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,12,57,720 ಆಗಿದ್ದು, ಈ ಪೈಕಿ 3,04,29,339 ಮಂದಿ ಚೇತರಿಸಿಕೊಂಡಿದ್ದು, ಕೊರೊನಾಗೆ 4,18,987 ಮಂದಿ ಬಲಿಯಾಗಿ ಪ್ರಸ್ತುತ 4,09,394 ಪ್ರಕರಣಗಳು ಸಕ್ರಿಯವಾಗಿವೆ.
ಜುಲೈ 21ರವರೆಗೂ 45,09,11,712 ಮಾದರಿಗಳ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಬುಧವಾರ 17,18,439 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನು ಭಾರತದಾದ್ಯಂತ ಈವರೆಗೂ 41,78,51,151 ಡೋಸ್ ಲಸಿಕೆ ಹಾಕಲಾಗಿದೆ.