ಹಜಾಹಾನ್ ಪುರ, ಜು.22 (DaijiworldNews/HR): ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಈ ವರ್ಷದ ಜನವರಿಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ವೈದ್ಯರು ಹೊಟ್ಟೆಯಲ್ಲಿ ಬಟ್ಟೆಯನ್ನು ಬಿಟ್ಟು ಹೋಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಮಹಿಳೆಯು ಈಗ ಗಂಭೀರ ಸ್ಥಿತಿಯಲ್ಲಿ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಆಘಾತ ಕೇಂದ್ರಕ್ಕೆ ದಾಖಲಾಗಿ ವೆಂಟಿಲೇಟರ್ ನಲ್ಲಿದ್ದಾರೆ ಎನ್ನಲಾಗಿದೆ.
ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಾಪುರ ಉತ್ತರ ನಿವಾಸಿ ಮನೋಜ್ ನೀಡಿದ ದೂರಿನ ಪ್ರಕಾರ, ಅವರ ಪತ್ನಿ ನೀಲಂ (30 ವರ್ಷ) ಜನವರಿ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಈ ಸಂದರ್ಭದಲ್ಲಿ ಅವರ ಹೊಟ್ಟೆಯಲ್ಲಿ ಬಟ್ಟೆಯನ್ನು ಬಿಡಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ದೂರು ಸ್ವೀಕರಿಸಿ ಡಾ. ಅರ್ಚನಾ, ಡಾ. ವಿಭೋರ್ ಕುಮಾರ್ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಸಂದೇಶ್ ಕುಮಾರ್ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿದ್ದು, ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳೆಯ ಪತಿ ವರದಿಗಾರರಿಗೆ ತಮ್ಮ ಮಗಳ ಜನನದ ನಂತರ, ಅವರ ಪತ್ನಿ ಹೊಟ್ಟೆ ನೋವಿನ ಬಗ್ಗೆ ದೂರು ಹೇಳುತ್ತಿದ್ದು, ಖಾಸಗಿ ವೈದ್ಯರ ಚಿಕಿತ್ಸೆಯಿಂದ ಯಾವುದೇ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಅವರು, ಶಹಜಹಾನ್ ಪುರದ ವೈದ್ಯಕೀಯ ಕಾಲೇಜಿಗೆ ಅವಳನ್ನು ಸೇರಿಸಿರುವುದಾಗಿ ಹೇಳಿದರು, ಅಲ್ಲಿ ಸಿಟಿ ಸ್ಕ್ಯಾನ್ ನಲ್ಲಿ ಆಕೆಯ ಹೊಟ್ಟೆಯಲ್ಲಿ ಬಟ್ಟೆಯನ್ನು ಬಿಡಲಾಗಿದೆ ಎಂದು ತಿಳಿದುಬಂದಿದೆ.