ಜಮ್ಮು, ಜು 21 (DaijiworldNews/PY): ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಬುದವಾರ ಮುಂಜಾನೆ ಮತ್ತೊಂದು ಡ್ರೋನ್ ಚಲನೆ ಪತ್ತೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಬುಧವಾರ ಮುಂಜಾನೆ 4.05 ಸುಮಾರಿಗೆ ವಾಯುನೆಲೆಯಿಂದ ನೂರು ಮೀಟರ್ ದೂರದಲ್ಲಿರುವ ಸತ್ವಾರಿಯ ಜಮ್ಮು ವಾಯುನೆಲೆಯ ಸಮೀಪ ಡ್ರೋನ್ ಪತ್ತೆಯಾಗಿದೆ.
ಜಮ್ಮು ವಿಮಾನ ನಿಲ್ದಾಣದ ಭಾರತೀಯ ವಾಯುಪಡೆ ನಿಲ್ದಾಣದಲ್ಲಿ ಸ್ಪೋಟಕಗಳನ್ನು ಬೀಳಿಸಲು ಜೂನ್ 27ರಂದು ಡ್ರೋನ್ಗಳನ್ನು ಬಳಸಲಾಗಿದ್ದು, ಪರಿಣಾಮ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿತ್ತು.
"ಭಯೋತ್ಪಾದಕ ಗುಂಪುಗಳ ಭದ್ರತಾ ಬೆದರಿಕೆಗಳಿಗೆ ಡ್ರೋನ್ಗಳು ಹೊಸ ಆಯಾಮವನ್ನು ಸೇರಿವೆ" ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
"ಈ ಹಿಂದೆ ಗಡಿಯಾಚೆಯಿಂದ ಡ್ರೋನ್ಗಳನ್ನು ಭಾರತೀಯ ಪ್ರದೇಶದೊಳಗೆ ಕರೆನ್ಸಿ, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಬೀಳಿಸಲು ಉಪಯೋಗಿಸಲಾಗಿದೆ. ಉಗ್ರ ಚಟುವಟಿಕೆಗಳಿಗೆ ಮಾನವರಹಿತ ವೈಮಾನಿಕ ವಾಹನಗಳನ್ನು ಪರಿಚಯಿಸುವುದರೊಂದಿಗೆ ಈ ರೀತಿಯ ಹೊಸ ಬೆದರಿಕೆಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ" ಎಂದಿದ್ದಾರೆ.