ಮುಂಬೈ, ಜು 21 (DaijiworldNews/PY): "ರಾಜ್ ಕುಂದ್ರಾ ಮಾಲೀಕತ್ವದ ಕಂಪನಿಯು ಲಂಡನ್ ಮೂಲದ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಆಶ್ಲೀಲ ಚಿತ್ರಗಳ ತಯಾರಿಕೆಯಲ್ಲಿ ತೊಡಗಿತ್ತು" ಎಂದು ಮುಂಬೈ ಪೊಲೀಸರು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
"ಲಂಡನ್ ಮೂಲದ ಕೆನ್ರಿಲ್ ಸಂಸ್ಥೆಯೊಂದಿಗೆ ರಾಜ್ ಕುಂದ್ರಾ ಅವರ ವಿಯಾನ್ ಇಂಡಸ್ಟ್ರೀಸ್ ಒಪ್ಪಂದ ಮಾಡಿಕೊಂಡಿತ್ತು. ಕೆನ್ರಿಲ್ ಸಂಸ್ಥೆಯು ಹಾಟ್ ಶಾಟ್ಸ್ ಎನ್ನುವ ಆಪ್ ಹೊಂದಿದ್ದು, ಆಶ್ಲೀ ಚಿತ್ರಗಳನ್ನು ತಯಾರಿಸಿ, ಬಿಡುಗಡೆ ಮಾಡುತ್ತಿತ್ತು" ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ರಾಜ್ ಕುಂದ್ರಾ ಅವರ ಕಂಪೆನಿ ಕ್ರೆನಿನ್ ಸಂಸ್ಥೆಯೊಂದಿಗೆ ಒಪ್ಪದ ಹೊಂದಿದ್ದು, ಭಾರತೀಯ ವೀಕ್ಷಕರಿಗಾಗಿ ಅಶ್ಲೀಲ ಚಿತ್ರಗಳನ್ನು ತಯಾರು ಮಾಡುವಲ್ಲಿ ಕಾರ್ಯನಿರತವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕ್ರೆನಿನ್ ಸಂಸ್ಥೆಯು ರಾಜ್ ಕುಂದ್ರಾ ಅವರ ಸೋದರ ಮಾವನ ಒಡೆತನದಲ್ಲಿದೆ ಎನ್ನುವ ಮಾಹಿತಿಯನ್ನೂ ಮುಂಬೈ ಪೊಲೀಸರು ನೀಡಿದ್ದಾರೆ.
ಅಶ್ಲೀ ಚಿತ್ರಗಳನ್ನು ತಯಾರಿಸಿದ ಹಾಗೂ ಬೇರೆ ಬೇರೆ ಆಪ್ಗಳಲ್ಲಿ ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದು, ಜುಲೈ 23ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಪೊಲೀಸರು ಮತ್ತೋರ್ವ ಆರೋಪಿ ರಿಯಾನ್ ಜಾನ್ ಎಂಬಾತನನ್ನು ಬಂಧಿಸಿದ್ದು, ಆತನನ್ನು ಆತನನ್ನು ಜುಲೈ 23ರವರೆಗೂ ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ.