ಬೆಂಗಳೂರು, ಜು.20 (DaijiworldNews/HR): 2020-21ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳು ಫಲಿತಾಂಶ ಪಡೆದಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿದಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಪಿಯುಸಿ ಫಲಿತಾಂಶ ಪ್ರಕಟ ಮಾಡಿರುವ ಸುರೇಶ್ ಕುಮಾರ್, ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿ ಮತ್ತು ಕೃಪಾಂಕ ಅಂಕ ಸೇರಿಸಿ ಈ ಬಾರಿ ಫಲಿತಾಂಶ ನೀಡಲಾಗಿದ್ದು, ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಅಗತ್ಯವಿಲ್ಲ. ನೋಂದಾವಣಿ ಮಾಡಿದ ಮೊಬೈಲ್ ಸಂಖ್ಯೆಗೆ ಫಲಿತಾಂಶವು ಸಂದೇಶ ರೂಪದಲ್ಲಿ ಬರುತ್ತದೆ" ಎಂದು ಹೇಳಿದರು.
ಇದಲ್ಲದೆ http://karresults.nic.in ವೆಬ್ಸೈಟ್ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಇನ್ನು ಈ ಬಾರಿ 450706 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 147055 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 68729 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಿಜಿಸ್ಟರ್ ನಂಬರ್ ಇಲ್ಲದೆ ನಿಮ್ಮ ರಿಸಲ್ಟ್ ನೋಡುವುದು ಹೇಗೆ:
ಪ್ರತಿ ವರ್ಷ ಪರೀಕ್ಷೆಗೆ ಕೊಟ್ಟ ನೋಂದಣಿ ಸಂಖ್ಯೆ ಮೇಲೆ ಫಲಿತಾಂಶ ಸಿಗುತ್ತಿದ್ದು, ಆದರೆ ಈ ಬಾರಿ ಪರೀಕ್ಷೆಯಾಗದೆ ರಿಜಿಸ್ಟರ್ ನಂಬರ್ ಸಿಕ್ಕಿಲ್ಲ. ಹಾಗಾಗಿ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. Know my number ಆಯ್ಕೆಯನ್ನು ಪಿಯು ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು.