ಚೆನ್ನೈ, ಜು.20 (DaijiworldNews/HR): ನಟಿ, ರಾಜಕಾರಣಿ ಖುಷ್ಬು ಸುಂದರ್ ಅವರ ಟ್ವಿಟರ್ ಖಾತೆ ಮತ್ತೆ ಹ್ಯಾಕ್ ಮಾಡಲಾಗಿದ್ದು, ಖುಷ್ಬು ಅವರ ಪ್ರೊಫೈಲ್ ಹೆಸರನ್ನು ಬ್ರಿಯಾನ್ ಎಂದು ಬದಲಾಯಿಸಿ ಕವರ್ ಇಮೇಜ್ ಅನ್ನು ಕೂಡ ಬದಲಾಯಿಸಿ ಎಲ್ಲಾ ಟ್ವೀಟ್ ಮತ್ತು ಪೋಸ್ಟ್ ಗಳನ್ನು ಅಳಿಸಲಾಗಿದೆ.
ಈ ಮೊದಲು ಏಪ್ರಿಲ್ 2020 ರಲ್ಲಿ ಖುಷ್ಬು ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ನಂತರ ಅವರು ತನ್ನ ಅಭಿಮಾನಿಗಳ ಸಹಾಯವನ್ನು ಕೋರಿದ್ದರು.
ಇನ್ನು ಖುಷ್ಬು ಸುಂದರ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಬಳಿಕ ಹ್ಯಾಕರ್ ಪ್ರದರ್ಶನ ಚಿತ್ರವನ್ನು ಬದಲಾಯಿಸಿದರು ಮತ್ತು ಖಾತೆಯ ಹೆಸರನ್ನು ಬ್ರಿಯಾನ್ ಎಂದು ಬದಲಾಯಿಸಿದರು. ಖಾತೆಯ ಕವರ್ ಇಮೇಜ್ ಅನ್ನು ಕೂಡ ಬದಲಾಯಿಸಲಾಗಿದೆ.
2020ರ ಏಪ್ರಿಲ್ ನಲ್ಲಿ ಖುಷ್ಬು ಸುಂದರ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಈ ಕುರಿತು ಮಾಹಿತಿಯನ್ನು ನಟಿ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದು, ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತನ್ನ ಅನುಯಾಯಿಗಳಿಗೆ ತಿಳಿಸಿದಳು. ಕಳೆದ 48 ಗಂಟೆಗಳ ಕಾಲ ಪಾಸ್ ವರ್ಡ್ ಬದಲಾಯಿಸಲು ಸಾಧ್ಯವಾಗದ ಕಾರಣ ಸಹಾಯ ಮಾಡುವಂತೆ ಅವರು ತಮ್ಮ ಅಭಿಮಾನಿಗಳನ್ನು ವಿನಂತಿಸಿದರು.