ಬೆಂಗಳೂರು, ಜು 20 (DaijiworldNews/MS): ಗಣಿ ಸಚಿವ ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ. ಅವರ ಬಳಿ 500 ಸಿಡಿಗಳಿವೆ ಎಂದು ಉದ್ಯಮಿ ಆಲಂ ಪಾಷ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಲಂ ಪಾಷ, ಸಚಿವ ನಿರಾಣಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದು, ಮುರುಗೇಶ್ ನಿರಾಣಿ ಬಳಿ ಸಾಕಷ್ಟು ರಾಜಕಾರಣಿಗಳು, ಪ್ರಮುಖ ನಾಯಕರ ಆಶ್ಲೀಲ ಸಿಡಿಗಳು ಸಿಡಿಗಳು ಇವೆ. ಅವಗಳನ್ನು ಇಟ್ಟುಕೊಂಡು ನಿರಾಣಿ ಬ್ಲ್ಯಾಕ್ ಮೇಲ್ ಮಾಡುತ್ತಾ ತಮ್ಮ ಕೆಲಸ ಸಾಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ರಾಜ್ಯದ ಮಂತ್ರಿಗಳ ಸಿಡಿ ಇದೆ ನಿರಾಣಿಗೆ ಭಯ ಪಟ್ಟು ಕೋರ್ಟ್ ನಿಂದ ಸ್ಟೇ ತರುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರ ಬಳಿ ಇರುವ ಸಿಡಿಗಳನ್ನು ಮಾಧ್ಯಮಗಳು ಕಂಡು ಹಿಡಿಯಲೇ ಬೇಕು . ನಾವು ಕಾನೂನು ಪ್ರಕಾರ ನಿರಾಣಿ ವಿರುದ್ದ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ರೈತರಿಗೆ ಸಿಗುವ ಶೇ.4 ರಷ್ಟು ಬಡ್ಡಿ ಕೃಷಿ ಸಾಲವನ್ನು ರೈತರ ನಕಲಿ ಆಧಾರ್ ಕಾರ್ಡ್ನ ಬಳಸಿ ಪಡೆದಿದ್ದಾರೆ. ಈ ರೀತಿಯಾಗಿ 8 ಸಾವಿರ ಕೋಟಿ ಅವ್ಯವಹಾರ ಮಾಡಿದ್ದಾರೆ. ಇದಲ್ಲದೆ ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಖಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ. ನಿರಾಣಿ ಶುಗರ್ಸ್ ನಲ್ಲಿ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದರು. ಇದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಲಂ ಪಾಷ ಆರೋಪಿಸಿದರು.
ಉದ್ಯಮಿ ಆಲಂ ಪಾಷ ಅವರು ಈ ಹಿಂದೆಯೂ ಸಚಿವ ನಿರಾಣಿ ವಿರುದ್ಧ ಆರೋಪ ಮಾಡಿದ್ದರು. ಒಟ್ಟಾರೆ ಮುಖ್ಯಮಂತ್ರಿ ಹುದ್ದೆಗೆ ನಿರಾಣಿ ಯತ್ನಿಸುತ್ತಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ ಇದೀಗ ಆಲಂ ಪಾಷ ಸಚಿವ ನಿರಾಣಿ ವಿರುದ್ಧ ಮಾಡಿರುವ ಆರೋಪ ಮಹತ್ವ ಪಡೆದುಕೊಂಡಿದೆ.