ಮುಂಬೈ, ಜು 20 (DaijiworldNews/MS): ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ನೀಲಿ ಚಿತ್ರಗಳನ್ನು ಆಪ್ ಲೋಡ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.
ಪೋರ್ನ್ ಸಿನಿಮಾಗಳನ್ನು ಮಾಡಿ ಅದನ್ನು ಬೇರೆ ಬೇರೆ ಆಪ್ ಗಳಲ್ಲಿ ಆಪ್ ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ರಾಜ್ ಕುಂದ್ರಾ ಮೇಲಿದೆ. ಈ ಪ್ರಕರಣ ಸಂಬಂಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದ್ದು, ರಾಜ್ ಕುಂದ್ರಾರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅಶ್ಲೀಲ ಚಲನಚಿತ್ರಗಳ ನಿರ್ಮಿಸಿ ಮತ್ತು ಅವುಗಳನ್ನು ಕೆಲವು ಆಪ್ ಮೂಲಕ ಪ್ರಕಟಿಸುವ ಬಗ್ಗೆ ಫೆಬ್ರವರಿ 2021 ರಲ್ಲಿ ಮುಂಬೈ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. . ಈ ಪ್ರಕರಣದಲ್ಲಿ ಶ್ರೀ ರಾಜ್ ಕುಂದ್ರಾ ಅವರನ್ನು ಜು.19 ರಂದು ಬಂಧಿಸಿದ್ದೇವೆ. ಈ ಬಗ್ಗೆ ನಮಗೆ ಸಾಕಷ್ಟು ಪುರಾವೆಗಳಿವೆ ಇಡೀ ಪ್ರಕರಣದ ರೂವಾರಿಅವರೇ ಆಗಿದ್ದಾರೆ "ಎಂದು ಮುಂಬೈ ಪೊಲೀಸ್ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೆಬ್ರುವರಿ ತಿಂಗಳಲ್ಲಿ ರಾಜ್ ಕುಂದ್ರಾ ವಿರುದ್ಧ ಈ ಸಂಬಂಧ ದೂರು ದಾಖಲಾಗಿತ್ತು. ಬಳಿಕ ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದ ರಾಜ್ ಕುಂದ್ರಾ, ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದರು.
ಶಿಲ್ಪಾ ಶೆಟ್ಟಿ 2009 ರಲ್ಲಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು ಮತ್ತು ವಿಯಾನ್ ರಾಜ್ ಕುಂದ್ರಾ ಪುತ್ರ ಹಾಗೂ ಪುತ್ರಿ ಸಮಿಷಾ ರೊಂದಿಗೆ ಸುಖ ಸಂಸಾರ ಮಾಡುತ್ತಿದ್ದಾರೆ.
ರಾಜ್ ಕುಂದ್ರಾ - ಜೆಎಲ್ ಸ್ಟ್ರೀಮ್ ಎಂಬ ಅಪ್ಲಿಕೇಶನ್ನ ಮಾಲೀಕರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡದ ರಾಜಸ್ಥಾನ್ ರಾಯಲ್ಸ್ನ ಭಾಗ ಮಾಲೀಕರಾಗಿದ್ದರು.
2013 ರಲ್ಲಿ, ಭಾರತೀಯ ಕ್ರಿಕೆಟ್ ಅನ್ನು ಆವರಿಸಿರುವ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅವರನ್ನು ಪ್ರಶ್ನಿಸಿದ್ದರು.