ಶಿವಮೊಗ್ಗ, ಜು 19 (DaijiworldNews/PY): "ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರ ವರ್ತನೆ ಇದೇ ರೀತಿ ಮುಂದುವರಿದಲ್ಲಿ ರಾಜ್ಯದ ಜನರು ಅವರಿಗೆ ಛೀಮಾರಿ ಹಾಕುವ ದಿನ ಬರಲಿದೆ" ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಕೊಂಡೊಯ್ದ ಆರು ಬ್ಯಾಗ್ನಲ್ಲಿ ಏನಿತ್ತು ಎಂದು ಕೇಳಿರುವುದು ಹೆಚ್ಡಿಕೆ ಅವರ ಕೀಳು ರಾಜಕೀಯಕ್ಕೆ ನಿದರ್ಶನವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಾಜ್ಯದ ನಾಲ್ವರು ನೂತನವಾಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರನ್ನು ಅಭಿನಂದಿಸಲು ಹಾರ, ಸ್ಮರಣಿಕೆಯನ್ನು ಆರು ಬ್ಯಾಗ್ಗಳಲ್ಲಿ ಕೊಂಡೊಯ್ದರೆ ಹೆಚ್ಡಿಕೆ ಕೊಂಕು ಮಾತನಾಡಿದ್ದಾರೆ. ಯಾರಿಂದಲೂ ಏನನ್ನಾದರೂ ಪಡೆಯುವ ವ್ಯಕ್ತಿತ್ವ ಪ್ರಧಾನಿ ಮೋದಿ ಅವರದಲ್ಲ. ಯಾರಿಗಾದರೂ ಏನನ್ನಾದರೂ ಕೊಟ್ಟು ತೃಪ್ತಿಪಡಿಸುವ ಅನಿವಾರ್ಯತೆ ಸಿಎಂ ಅವರಿಗಿಲ್ಲ" ಎಂದಿದ್ದಾರೆ.