ಬೆಂಗಳೂರು, ಜು.19 (DaijiworldNews/HR): ನಟ ದರ್ಶನ್ ವಿರುದ್ಧ ಮಾತನಾಡಿದಕ್ಕಾಗಿ ಅವರ ಅಭಿಮಾನಿಗಳು ಪೋನ್, ಮೆಸೇಜ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದರ್ಶನ್ ಅಭಿಮಾನಿಗಳಿಂದ ನನಗೆ 10 ಸೆಕೆಂಡ್, 20, 30 ಸೆಕೆಂಡ್ಗೆ ಒಮ್ಮೆ ಕರೆ ಬರ್ತಾ ಇದ್ದು, ಪೋನ್ ರಿಸೀವ್ ಮಾಡಿದ್ರೇ ಮಾತನಾಡುತ್ತಿಲ್ಲ. ಬರೀ ಕಾಲ್ ಮಾಡುತ್ತಿದ್ದಾರೆ. ಜೊತೆಗೆ ವಾಟ್ಸಾಪ್ ಮೂಲಕವೂ ಅಶ್ಲೀಲ ಸಂದೇಶ, ಪೋಟೋ ಕಳಿಸಿ ತೊಂದರೆ ಕೊಡುತ್ತಿದ್ದು ಸೈಬರ್ ಕ್ರೈಂ ಪೊಲೀಸರು ದೂರು ನೀಡುತ್ತಿದ್ದೇನೆ" ಎಂದರು.
ಇನ್ನು ಕೆಲವು ಕರೆಗಳಲ್ಲಿ ನನಗೆ ಬೆದರಿಕೆ ಹಾಕುತ್ತಿದ್ದು, ಕೆಲವು ಕಾಲ್ ರಿಸೀವ್ ಮಾಡಿದ್ರೆ ಮಾತನಾಡುತ್ತಿಲ್ಲ. ವೀಡಿಯೋ ಕಾಲ್ ಸೇರಿದಂತೆ ಸಂದೇಶ ಕೂಡ ಕಳಿಸಿ ಬೆದರಿಕೆ ಹಾಕ್ತಾ ಇದ್ದಾರೆ. ಈ ಎಲ್ಲಾ ದಾಖಲೆಗಳನ್ನು ನಟ ದರ್ಶನ್ ಹಿಂಬಾಲಕೇ ಮಾಡುತ್ತಿದ್ದಾರೆ. ಹೀಗಾಗಿ ನಾನು ಆ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.