ವಿಜಯಪುರ, ಜು 19 (DaijiworldNews/PY): "ಕೆಲವರು ದೆಹಲಿಗೆ ಹೋಗಿ 2,000 ಕೋಟಿ ರೂ. ನೀಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೆಹಲಿಗೆ ಯಾರ್ಯಾರೋ ಹೋಗುತ್ತಾರೆ. ಅಲ್ಲದೇ, ವಿವಿಧ ಆಮಿಷಗಳನ್ನು ಒಡ್ಡಲು ಮುಂದಾಗುತ್ತಾರೆ. ಆದರೆ, ಬಿಜೆಪಿಯಲ್ಲಿ ಹಾಗಿಲ್ಲ. ಯಾವುದಕ್ಕೂ ಬಗ್ಗಲ್ಲ. ಕಲೆವರು ದೆಹಲಿಗೆ ಹೋಗಿ 2,000 ಕೋಟಿ ರೂ. ನೀಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ. ಈ ರೀತಿಯೆಲ್ಲಾ ಹೇಳಿದರೆ ಪಕ್ಷ ಸುಮ್ಮನಿರುತ್ತಾ?" ಎಂದು ಪ್ರಶ್ನಿಸಿದ್ದಾರೆ.
"ಎಲ್ಲಾ ಸಮುದಾಯದವರನ್ನು ಪ್ರಧಾನಿ ಮೋದಿ ಅವರು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ಮಾಡಿದ್ದಾರೆ. ಹಿಂದುಳಿದವರು ಸೇರಿದಂತೆ ದಲಿತರು ಹಾಗೂ ಪ್ರಮುಖವಾಗಿ ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಹೀಗಿರುವಾಗ ಯಾರೋ ಹೋಗಿ 2,000 ಕೋಟಿ ರೂ. ನೀಡುತ್ತೇನೆ ನನ್ನನ್ನು ಸಿಎಂ ಮಾಡಿ ಎಂದರೆ ಕಪಾಳಕ್ಕೆ ಬಾರಿಸಿ ಕಳುಹಿಸುತ್ತಾರೆ" ಎಂದಿದ್ದಾರೆ.