ನವದೆಹಲಿ, ಜು.19 (DaijiworldNews/HR): ಲೋಕಸಭೆಯಲ್ಲಿ ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಕಲಾಪದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ ಸಂದರ್ಭದಲ್ಲಿ ವಿಪಕ್ಷಗಳು ತೀವ್ರ ಕೋಲಾಹಲ ಎಬ್ಬಿಸಿದ್ದರಿಂದಾಗಿ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2ಗಂಟೆವರೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಹೊಸ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದು, ಸದನ ಆರಂಭವಾದಾಗ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಕಲಾಪದಲ್ಲಿ ನೂತನ ಸಚಿವರ ಆಯ್ಕೆ ಕುರಿತು ಪ್ರಧಾನಿ ಮೋದಿ ಅವರು ಮಾತನಾಡಿದ ವೇಳೆ, ವಿರೋಧ ಪಕ್ಷಗಳು ಕೋಲಾಹಲ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ವಿಪಕ್ಷಗಳು ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕಲಾಪದಲ್ಲಿ ಕೇಳಬಹುದು, ಆದರೆ ಸದನದಲ್ಲಿ ಸರ್ಕಾರ ಉತ್ತರ ನೀಡಲು ವಿಪಕ್ಷಗಳು ಯಾವುದೇ ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಕಲಾಪ ಆರಂಭಕ್ಕೂ ಮುನ್ನ ಮನವಿ ಮಾಡಿಕೊಂಡಿದ್ದರು.