ನವದೆಹಲಿ, ಜು 19 (DaijiworldNews/PY): "ಎಲ್ಲರೂ ಕೊರೊನಾ ಲಸಿಕೆ ಪಡೆಯಿರಿ. ಕೊರೊನಾ ಲಸಿಕೆಯು ನಿಮ್ಮನ್ನು ಬಾಹುಬಲಿಯನ್ನಾಗಿಸುತ್ತೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ ಭವನದಲ್ಲಿ ಮಾತನಾಡಿದ ಅವರು, "ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಎಲ್ಲರೂ ಕೊರೊನಾ ಲಸಿಕೆ ಪಡೆಯಿರಿ. ಕೊರೊನಾ ಲಸಿಕೆ ತೆಗೆದುಕೊಳ್ಳುವ ಮಂದಿ ಬಾಹುಬಲಿಯಂತಾಗುತ್ತಾರೆ" ಎಂದಿದ್ದಾರೆ.
"ಕೊರೊನಾ ವಿರುದ್ದದ ಹೋರಾಟದಲ್ಲಿ 40 ಕೋಟಿಗೂ ಅಧಿಕ ಮಂದಿ ಬಾಹುಬಲಿಯಾಗಿದ್ದಾರೆ. ಇಡೀ ಜಗತ್ತನ್ನು ಸಾಂಕ್ರಾಮಿಕ ರೋಗ ಆವರಿಸಿಕೊಂಡಿದೆ. ಹಾಗಾಗಿ ನಾವು ಸಾಂಕ್ರಾಮಿಕದ ವಿಚಾರವಾಗಿ ಅರ್ಥಪೂರ್ಣ ಚರ್ಚೆಗಳನ್ನು ಬಯಸುತ್ತೇವೆ" ಎಂದು ತಿಳಿಸಿದ್ದಾರೆ.