ಶೋಪಿಯಾನ್, ಜು 19 (DaijiworldNews/PY): ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಸೋಮವಾರ ನಸುಕಿನ ವೇಳೆ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ಗೆ ನಿಷೇಧಿತ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಹತ್ಯೆಯಾದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಭದ್ರತಾ ಪಡೆ ನಡೆಸಿದ ಎನ್ಕೌಂಟರ್ಗೆ ಲಷ್ಕರ್ ಕಮಾಂಡರ್ ಇಶ್ಫಾಕ್ ದಾರ್ ಅಲಿಯಾಸ್ ಅಬು ಅಕ್ರಮ್ ಮೃತಪಟ್ಟಿರುವುದಾಗಿ ಕಾಶ್ಮೀರ ಕಣಿವೆಯ ಐಜಿಪಿ(ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್) ಮಾಹಿತಿ ನೀಡಿದ್ದಾರೆ.
ಅಬು ಅಕ್ರಮ್, ಕಾಶ್ಮೀರ ಕಣಿವೆಯಲ್ಲಿ 2017ರಿಂದಲೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು. ಭದ್ರತಾ ಪಡೆಯ ಕಾರ್ಯಾಚರಣೆಯ ಸಂದರ್ಭ ಅಕ್ರಮ್ ಹಾಗೂ ಇನ್ನೋರ್ವ ಉಗ್ರ ಎನ್ಕೌಂಟರ್ಗೆ ಬಲಿಯಾಗಿರುವುದಾಗಿ ಐಜಿಪಿ ಕುಮಾರ್ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಘಟನಾ ಸ್ಥಳದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ಶೋಪಿಯಾನ್ ಪ್ರದೇಶದ ಸಿದಿಖಿ ಖಾನ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಭದ್ರತಾ ಪಡೆ ಹಾಗೂ ಉಗ್ರ ನಡುವೆ ಗುಂಡಿನ ಚಕಮಕಿ ಪ್ರಾರಂಭಗೊಂಡಿತ್ತು.