ಚಿಕ್ಕಮಗಳೂರು, ಜು.18 (DaijiworldNews/HR): ಪ್ರವಾಸಿಗರು ನಡು ರಸ್ತೆ ಮಧ್ಯೆ ಯೇ ಕುಣಿದು ಕುಪ್ಪಳಿಸಿ ವಾಹನ ಸವಾರಿಗೆ ಅಡಚಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಇಂದು ನಡೆದಿದೆ.
ಜಲಪಾತಗಳ ಸಮೀಪ ರಸ್ತೆಯಲ್ಲಿಯೇ ವಾಹನ ನಿಲುಗಡೆ ಮಾಡಿರುವ ಪ್ರವಾಸಿಗರು ವಾಹನ ಸಂಚಾರ ಅಡಚಣೆ ಮಾಡಿದ್ದು, ಜೊತೆಗೆ ನಡು ರಸ್ತೆ ಮಧ್ಯೆಯೇ ಕುಣಿದು ಕುಪ್ಪಳಿಸಿದ್ದಾರೆ.
ಇನ್ನು ಅಪಾಯದ ಸ್ಥಳವಾದ ಬಂಡೆಯ ಮೇಲೆ ಹತ್ತಿ ಪ್ರವಾಸಿಗಳು ಸೆಲ್ಫಿ ಕ್ಲಿಕಿಸಿದ್ದಾರೆ ಎನ್ನಲಾಗಿದೆ.