ಬೆಂಗಳೂರು, ಜು 18 (DaijiworldNews/PY): "ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿದ್ದಂತೆ ಬಿಜೆಪಿಯಲ್ಲಿ ಯುವ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ನಡೆಯುವುದಿಲ್ಲ. ಬಿಜೆಪಿಯಲ್ಲಿ ದಲಿತ ಯುವಕನನ್ನು ಗುರುತಿಸಿ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಈ ಬಾರಿ ದಲಿತ ಯುವಕನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ" ಎಂದು ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ನ ಯುವ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದವರು ಯಾರೋ? ಬಳಿಕ ಅಧ್ಯಕ್ಷರಾದವರು ಯಾರೋ?. ನಮ್ಮ ಕಡೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಜಗಳ ಮಾಡುತ್ತಿದ್ದಾರೆ. ಮೊದಲು ಎಲೆಕ್ಷನ್ ಮಾಡುತ್ತಾರೆ. ಬಳಿಕ ಫ್ರಾಡ್ ಎನ್ನುತ್ತಾರೆ. ಇದೀಗ ಫಿಫ್ಟಿ ಫಿಫ್ಟಿ" ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
"ಜೆಡಿಎಸ್ ಪಕ್ಷದಲ್ಲಿ ಮೊಮ್ಮಕ್ಕಳು ಇದ್ದವರಿಗಷ್ಟೇ ಯುವಘಟಕದ ಸ್ಥಾನ ನೀಡುತ್ತಾರೆ" ಎಂದು ಎರಡು ರಾಷ್ಟ್ರೀಯ ಪಕ್ಷಗಳಿಗೆ ಲೇವಡಿ ಮಾಡಿದ್ದಾರೆ.
"ಈಗಾಗಲೇ ನಮ್ಮಲ್ಲಿ ಒಬ್ಬರು ಸಿಎಂ ಇದ್ದಾರೆ. ಈ ವಿಚಾರವಾಗಿ ಚರ್ಚೆ ಇಲ್ಲ" ಎಂದಿದ್ದಾರೆ.