ನವದೆಹಲಿ, ಜು 18 (DaijiworldNews/PY): ಸಂಸತ್ತಿನ ಮುಂಗಾರು ಅಧಿವೇಶದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಪಕ್ಷದ ಸದಸ್ಯರ ಗುಂಪನ್ನು ಪುನರ್ ರಚಿಸಿದ್ದಾರೆ.
ಮಾಜಿ ಕೇಂದ್ರ ಸಚಿವರಾದ ಪಿ.ಚಿದಂಬರಂ, ಮನೀಶ್ ತಿವಾರಿ, ಅಂಬಿಕಾ ಸೋನಿ ಹಾಗೂ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರನ್ನು ಮತ್ತೆ ಈ ಗುಂಪಿಗೆ ಕರೆತರಲಾಗಿದೆ.
ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿ ಅಧೀರ್ ರಂಜನ್ ಚೌದರಿ, ಗೌರವ್ ಗೊಗೊಯ್ ಉಪನಾಯಕರಾಗಿದ್ದಾರೆ. ಕೆ. ಸುರೇಶ್-ಮುಖ್ಯ ವಿಪ್, ಮನೀಶ್ ತಿವಾರಿ ಡಾ. ಶಶಿ ತರೂರ್, ರಾವ್ನೀತ್ ಸಿಂಗ್ ಬಿಟ್ಟು- ವಿಪ್ ,ಮಾಣಿಕಂ ಟ್ಯಾಗೋರ್- ವಿಪ್ ಆಗಿ ನೇಮಕಗೊಂಡಿದ್ದಾರೆ.
ರಾಜ್ಯ ಸಭೆಯ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ, ಉಪನಾಯಕರಾಗಿ ಆನಂದ್ ಶರ್ಮಾ, ಜೈರಾಮ್ ರಮೇಶ್-ಮುಖ್ಯ ವಿಪ್ ಆಗಿದ್ದಾರೆ.
"ಈ ಗುಂಪುಗಳು ಅಧಿವೇಶನದಲ್ಲಿ ಪ್ರತಿದಿನ ಭೇಟಿಯಾಗುತ್ತವೆ. ಅಂತರ-ಅಧಿವೇಶನ ಅವಧಿಗಳಲ್ಲಿ ಹಾಗೂ ಸಂಸತ್ತಿನ ಸಮಸ್ಯೆಗಳಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಭೇಟಿಯಾಗಬಹುದು" ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
"ಈ ಗುಂಪುಗಳ ಜಂಟಿ ಸಭೆ ಕರೆಯಬಹುದಾಗಿದ್ದು, ಅಗತ್ಯದ ಸಂದರ್ಭ ಮಲ್ಲಿಕಾರ್ಜುನ ಖರ್ಗೆ ಜಂಟಿ ಸಭೆಗಳ ಕನ್ವೀನರ್ ಆಗಿರುತ್ತಾರೆ" ಎಂದು ಹೇಳಿದ್ದಾರೆ.