ಬೆಂಗಳೂರು, ಜು.18 (DaijiworldNews/HR): ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಾಜ್ಯದಲ್ಲಿ ಪದವಿ ತರಗತಿಗಳ ಆರಂಭದ ಕುರಿತಂತೆ 3-4 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕೊರೊ ಲಸಿಕೆ ಹಾಕುವ ಕುರಿತು ಮಾತನಾಡಿದ ಅವರು, "ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ ಶೇ.65ರಷ್ಟು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಲಾಗಿದ್ದು, ಲಸಿಕೆ ಅಭಿಯಾನವನ್ನು ನಾವು ಮತ್ತಷ್ಟು ಬಲಪಡಿಸುತ್ತಿದ್ದೇವೆ" ಎಂದಿದ್ದಾರೆ.
ಇನ್ನು ಬೆಸ ಮತ್ತು ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ ಗಳ ಪ್ರಾಯೋಗಿಕ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದ ಅವರು, ಡಿಪ್ಲೊಮಾ ಕೋರ್ಸ್ ಗಳ ಸೆಮಿಸ್ಟರ್ ಗಳ ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್ 2 ರಿಂದ 12 ರವರೆಗೆ ನಡೆಯಲಿವೆ ಮತ್ತು ಥಿಯರಿ ಪರೀಕ್ಷೆಗಳು ನವೆಂಬರ್ 17 ರಿಂದ ಡಿಸೆಂಬರ್ 6 ರವರೆಗೆ ನಡೆಯಲಿವೆ" ಎಂದು ತಿಳಿಸಿದ್ದಾರೆ.