ಲಕ್ನೋ, ಜು 18 (DaijiworldNews/PY): ಕೊರೊನಾ ಕಾರಣದಿಂದ ಉತ್ತರಪ್ರದೇಶ ಸರ್ಕಾರ ಈ ಬಾರಿಯ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ.
ಕೊರೊನಾ ನಡುವೆಯೂ ಯುಪಿ ಸರ್ಕಾರ ಕನ್ವರ್ ಯಾತ್ರೆ ನಡೆಸಲು ಅನುಮತಿ ನೀಡಿತ್ತು. ಹಾಗಾಗಿ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.
ಕನ್ವರ್ ಯಾತ್ರೆಯನ್ನು ನಡೆಸಬೇಕು ಎನ್ನುವ ತೀರ್ಮಾನವನ್ನು ಮರುಪರಿಶೀಲನೆ ನಡೆಸಲು ಉತ್ತರಪ್ರದೇಶ ಸರ್ಕಾರಕ್ಕೆ ನಾವು ಇನ್ನೊಂದು ಅವಕಾಶ ನೀಡುತ್ತೇವೆ. ಒಂದುವೇಳೆ ತಿದ್ದಿಕೊಳ್ಳದೇ ಇದ್ದಲ್ಲಿ ನಾವೇ ಆದೇಶವನ್ನು ರವಾನಿಸುತ್ತೇವೆ. ಧಾರ್ಮಿಕ ಹಾಗೂ ಎಲ್ಲಾ ಇತರೆ ಭಾವನೆಗಳಿಗಿಂತ ಜನರ ಮೂಲಭೂತ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಈ ಬಗ್ಗೆ ನೀವೃ ಪರಿಶೀಲಿಸಿ ಇಲ್ಲವೇ ನಾವೇ ಆದೇಶ ಹೊರಡಿಸುತ್ತೇವೆ ಎಂದು ಸುಪ್ರಿಂ ಕೋರ್ಟ್ ತಿಳಿಸಿತ್ತು.
ಉತ್ತರಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವ್ನಿಶ್ ಅವಸ್ಥಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮುಕುಲ್ ಗೋಯಲ್ ಅವರು ಕನ್ವರ್ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ನಂತರ ಯಾತ್ರೆ ರದ್ದಾದ ಮಾಹಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.