ಕೊಚ್ಚಿ, ಜು 17 (DaijiworldNews/PY): ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯಿಂದ ಕೇರಳ ಬಿಜೆಪಿ ಉಪಾಧ್ಯಕ್ಷ ಡಾ.ಕೆ.ಎಸ್ ರಾಧಾಕೃಷ್ಣನ್ ಅವರಿಗೆ ಜೀವ ಬೆದರಿಕೆ ಬಂದಿದೆ.
ರಾಧಾಕೃಷ್ಣನ್ ಅವರಿಗೆ 971556443094 ಸಂಖ್ಯೆಯಿಂದ ಜೀವ ಬೆದರಿಕೆ ಕರೆ ಬಂದಿದ್ದು. ಕರೆ ಸ್ವೀಕರಿಸಿದ ವೇಳೆ ಮತನಾಡಿದ ವ್ಯಕ್ತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಪರಿಚಿತ ವ್ಯಕ್ತಿ ಐಎಸ್ಐಸ್ ಭಯೋತ್ಪಾಕದ ಎಂದು ಹೇಳಿಕೊಂಡಿದ್ದು, ಆತ 11.32ರ ಸುಮಾರಿಗೆ ಕರೆ ಮಾಡಿದ್ದಾನೆ ಎಂದು ಬಿಜೆಪಿ ಮುಖಂಡ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕನನ್ನು ಯುಎಇ ಮೂಲದ ಸಂಖ್ಯೆಯಿಂದ ಸಂಪರ್ಕಿಸಲು ಇನ್ನೂ ಎರಡು ಯತ್ನಗಳು ನಡೆದಿದ್ದು, ಬಳಿಕ ಎರ್ನಾಕುಳಂನಗರ ಪೊಲೀಸ್ ಆಯುಕ್ತರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಇ-ಮೇಲ್ ಮೂಲಕ ದೂರು ನೀಡಿದ್ದರು.
ಇದು ರಾಧಾಕೃಷ್ಣನ್ ಅವರಿಗೆ ಐಎಸ್ಐಎಸ್ನಿಂದ ಬಂದ ಮೂರನೇ ಬೆದರಿಕೆ ಕರೆಯಾಗಿದೆ. ಇದಕ್ಕೂ ಮುನ್ನ ಕೇರಳದ ಗೃಹ ಸಚಿವರಾದ ಕೊಡಿಯೇರಿ ಬಾಲಕೃಷ್ಣನ್ ಅವರ ಅಧಿಕಾರವಧಿಯ ಸಂದರ್ಭ ಈ ರೀತಿಯ ಬೆದರಿಕೆ ಕರೆ ಬಂದ ವೇಳೆ ಅವರಿಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು.
ಎಡಿಜಿಪಿ ಮನೋಜ್ ಅಬ್ರಹಾಂ ಅವರ ಮುಂದೆ ಸಲ್ಲಿಸಲಾದ ದೂರಿನಲ್ಲಿ ಬೆದರಿಕೆ ವಿಚಾರವಾಗಿ ಈ ಹಿಂದಡ ಬಿಜೆಪಿ ಮುಖಂಡರಿಂದ ದಾಖಲಾದ ದೂರಿನಲ್ಲಿ ಯಾವುದೇ ರೀತಿಯಾದ ಪ್ರಗತಿ ಕಂಡುಬಂದಿಲ್ಲ ಎಂದು ಮೂಲಗಳು ಹೇಳಿವೆ.