ಮಹಾರಾಷ್ಟ್ರ, ಜು 17 (DaijiworldNews/MS): ಮಹಾರಾಷ್ಟ್ರದ ಶಿರ್ಪುರದಲ್ಲಿ ತರಬೇತಿ ವಿಮಾನ ಅಪಘಾತಕ್ಕೀಡಾದ ನಂತರ ಓರ್ವ ಪೈಲಟ್ ಸಾವನ್ನಪ್ಪಿದ್ದಾನೆ ಎಂದು ಡಿಜಿಸಿಎ ತಿಳಿಸಿದೆ.
ವಿಮಾನದಲ್ಲಿದ್ದ ಬೋಧಕ ಕ್ಯಾಪ್ಟನ್ ಲುರುಲ್ ಅಮೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ತರಬೇತಿ ಪಡೆಯುತ್ತಿದ್ದ ಅನ್ಶಿಕಾ ಗುರ್ಜರ್ ಗಾಯಗೊಂಡಿದ್ದಾರೆ. ವಿಮಾನವು ನಾರ್ಸಿ ಮೊಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಅಕಾಡೆಮಿ ಆಫ್ ಏವಿಯೇಷನ್ ಗೆ ಸೇರಿತ್ತು.
ವಿಮಾನ ಪತನಲಾಗುತ್ತಿದ್ದಂತೆಯೇ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳು ಪೈಲಟ್ ಅನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಸಂಜೆ 4.30 ರ ಸುಮಾರಿಗೆ ಸತ್ಪುರ ಪರ್ವತ ಶ್ರೇಣಿಗಳ ಭಾಗವಾಗಿರುವ ಜಿಲ್ಲೆಯ ಚೋಪ್ಡಾ ಪ್ರದೇಶದ ವಾರ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ತನಿಖಾಧಿಕಾರಿಗಳು ದೌಡಾಯಿಸಿದ್ದು ತನಿಖೆ ನಡೆಸಿದ್ದಾರೆ. ಅಲ್ಲದೆ ಗಾಯಾಳು ಪೈಲಟ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.