ನವದೆಹಲಿ, ಜು 17 (DaijiworldNews/PY): "ದೇಶದ ಬ್ಯಾಂಕ್ಗಳಿಗೆ ಮೋಸ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ವಿಜಯ ಮಲ್ಯ ಅವರ ಷೇರುಗಳ ಮಾರಾಟದಿಂದ ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟ 792.11 ಕೋಟಿ ರೂ. ಗಳನ್ನು ಮಸೂಲಿ ಮಾಡಿದೆ" ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
"ಈ ಮೂರು ಆರೋಪಿಗಳ ಆಸ್ತಿ ಮಾರಾಟದಿಂದ 13 ಸಾವಿರದ 109 ಕೋಟಿ ರೂ. ವಸೂಲಿಯಾಗಿದೆ" ಎಂದು ಇಡಿ ಹೇಳಿದೆ.
ವಿಜಯ್ ಮಲ್ಯ ಅವರಿಂದ ಬ್ಯಾಂಕ್ ಒಕ್ಕೂಟಕ್ಕೆ ಒಟ್ಟು 9,900 ಕೋಟಿ ರೂ. ಸುಸ್ತಿ ಸಾಲ ಬಾಕಿ ಇದ್ದು, ಇದಲ್ಲಿ ಈಗಾಗಲೇ ಎರಡು ಸಂದರ್ಭಗಳಲ್ಲಿ 5,824 ಕೋಟಿ ರೂ. ಹಾಗೂ 1,357 ಕೋಟಿ ರೂ. ವಸೂಲು ಮಾಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚನೆ ಪ್ರಕರಣದ ಆರೋಪಿಗಾದ ನೀರವ್ ಮೋದಿ ಹಾಗೂ ಮೆಹುಲ್ ಚೀಕ್ಸಿ 13 ಸಾವಿರ ಕೋಟಿ ರೂ. ಪಾವತಿಸಬೇಕಿತ್ತು. ಇದಕ್ಕೂ ಮೊದಲು ಎಸ್ಬಿಐ ನೇತೃತ್ವದ ಒಕ್ಕೂಟವು ಆಸ್ತಿಗಳನ್ನು ಹರಾಜು ಮಾಡುವ ಮೂಲಕ 7 ಸಾವಿರದ 181 ಕೋಟಿ ರೂ. ಗಳನ್ನು ವಸೂಲಿ ಮಾಡಿತ್ತು.
ಜಾರಿ ನಿರ್ದೇಶನಾಲಯವು ವಿಜಯ್ ಮಲ್ಯ ವಿರುದ್ದದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಬಹುತೇಕ ಷೇರುಗಳು ಯುಬಿಎಲ್, ಯುಎಸ್ಎಲ್ ಹಾಗೈ ವಿಜಯ್ ಮಲ್ಯರ ಹೆಸರಿನಲ್ಲಿರುವ ಏಳು ವಿಭಿನ್ನ ಕಂಪೆನಿಗಳದ್ದಾಗಿತ್ತು.
"ನೀರವ್ ಮೋದಿ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯವು 1,060 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲು ಬ್ಯಾಂಕ್ಗಳಿಗೆ ಅನುಮತಿಸಿದೆ. ಜಾರಿ ನಿರ್ದೇಶನಾಲಯವು, ಆರ್ಥಿಕ ಅಪರಾಧ ಕಾಯ್ದೆಯ ನಿಬಂಧನೆಗಳ ಪ್ರಕಾರ 329.67 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ" ಎಂದು ಸಂಸ್ಥೆ ಮಾಹಿತಿ ನೀಡಿದೆ.