ಛತ್ತೀಸ್ಗಡ, ಜು 16 (DaijiworldNews/PY): 50 ವರ್ಷದ ವ್ಯಕ್ತಿಯೋರ್ವನನ್ನು ನಕ್ಸಲರು ಹತ್ಯೆಗೈದ ಘಟನೆ ಜಿಲ್ಲೆಯ ಮೊಡಕ್ಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನುಕನ್ಪಾಲ್ ಹಳ್ಳಿಯಲ್ಲಿ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಹತ್ಯೆಗೊಳಗಾದ ವ್ಯಕ್ತಿಯನ್ನು ಮುರಾ ಕುದಿಯಂ (50) ಎಂದು ಗುರುತಿಸಲಾಗಿದೆ. ಕುದಿಯಂ ಅವರು ಕಾರ್ಯಕ್ರಮದ ನಿಮಿತ್ತ ತೆರಳಿದ್ದರು ಅವರನ್ನು ಹತ್ಯೆ ಮಾಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, "ನಾಗರಿಕರ ವೇಶದಲ್ಲಿ ಸಶಸ್ತ್ರಧಾರಿ ಮಾವೊವಾದಿ ಉಗ್ರರು ಉಸೂರ್ ಹಳ್ಳಿಯ ಬಳಿ ಕುದಿಯಂ ಅವರನ್ನು ಸುತ್ತುವರೆದಿದ್ದು, ಅವರನ್ನು ಚೂಪಾದ ಆಯುಧಗಳಿಂದ ಹಲವಾರು ಬಾರಿ ಇರಿದು ಕೊಂದಿದ್ದಾರೆ. ನಕ್ಸಲರು ಅಲ್ಲಿಂದ ವಾಪಾಸ್ಸಾಗುವ ಮುನ್ನ ಕುದಿಯಂ ಅವರ ಶವವನ್ನು ರಸ್ತೆಯ ಮೇಲೆ ಹಾಕಿದ್ದಾರೆ" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಕುಟುರು ಪ್ರದೇಶದಲ್ಲಿ ಜುಲೈ 11ರಂದು 32 ವರ್ಷದ ವ್ಯಕ್ತಿಯೊಬ್ಬನನ್ನು ನಕ್ಸಲರು ಹತ್ಯೆಗೈದಿದ್ದರು. ಇದು ಎರಡನೇ ಹತ್ಯೆಯಾಗಿದೆ.