ನವದೆಹಲಿ, ಜು.16 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಸಿಎಂ ಯಡಿಯೂರಪ್ಪ ಸೇರಿದಂತೆ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಇಂದು ಸಭೆ ನಡೆಸಿದ್ದು, ಕೊರೊನಾ ಸೋಂಕಿನ ಪರಿಸ್ಥಿತಿ ಮತ್ತು ಲಸಿಕೆ ಹಂಚಿಕೆ ಹಾಗೂ ಕೊರೊನಾ 3 ನೇ ಅಲೆ ಕುರಿತು ಚರ್ಚಿಸಿದ್ದಾರೆ.
ಈ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಒಡಿಶಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿ ಪ್ರಧಾನಿ ಮೋದಿ, "ಅನ್ ಲಾಕ್ ನಂತರದ ಪರಿಸ್ಥಿತಿ ಆತಂಕ ಮೂಡಿಸುತ್ತಿದ್ದು, ಅನ್ ಲಾಕ್ ಬಳಿಕ ಬೇಜವಾಬ್ದಾರಿತನ ಹೆಚ್ಚುತ್ತಿದೆ. ಅಮೇರಿಕಾ, ಯುರೋಪ್, ಪಾಶ್ಚಿಮಾತ್ಯ ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಕೊರೊನಾ ಸೋಂಕು ನಮ್ಮಿಂದ ದೂರ ಹೋಗಿಲ್ಲ. ಇನ್ನೂ ಹೆಚ್ಚಿನ ಎಚ್ಚರ ಅಗತ್ಯ" ಎಂದಿದ್ದಾರೆ.
ಇನ್ನು ಕೊರೊನಾ ಹೆಚ್ಚುತ್ತಿರುವ ಕಡೆ ತಕ್ಷಣ ಕ್ರಮ ತೆಗೆದುಕೊಳ್ಳಿ, ಮೈಕ್ರೊ ಕಂಟೇನ್ ಮೆಂಟ್ ಜೋನ್ ಗಳ ಬಗ್ಗೆ ಎಚ್ಚರವಹಿಸಿದ್ದು, ಕೊರೊನಾ ನಿಯಂತ್ರಣಕ್ಕೆ 4ಟಿ ಸೂತ್ರ ನೀಡಲಾಗಿದ್ದು, ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್, ಟೀಕಾ ಈ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು" ಸೂಚನೆ ನೀಡಿದ್ದಾರೆ.