ಬೆಂಗಳೂರು,ಜು.16 (DaijiworldNews/HR): ನಟ ದರ್ಶನ್ ವಿರುದ್ಧ ಆರೋಪಗಳ ಕೇಳಿಬರುತ್ತಿರುವ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಹರಿಬಿಟ್ಟಿದ್ದಾರೆ.
ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಯಾವುದೇ ರಾಜಿ-ಸಂಧಾನ ಮಾಡಿಕೊಂಡ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್, ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು,ವಂಚನೆ ಯತ್ನ ಪ್ರಕರಣದಲ್ಲಿ ಕೇಳಿಬಂದಿರುವ ಅರುಣಾ ಕುಮಾರಿಗೆ ದರ್ಶನ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಸಂದೇಶ್ ನಾಗರಾಜ್ ಒಡೆತನದ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಕೂಡ ಆರೋಪಿಸಿದ್ದಾರೆ.
ಇನ್ನು ಲಂಕೇಶ್ ಆರೋಪಗಳಿಂದ ಕೋಪಗೊಂಡ ದರ್ಶನ್ ಅಭಿಮಾನಿಗಳು ಲಂಕೇಶ್ ವಿರುದ್ಧ ಗರಂ ಆಗಿದ್ದಾರೆ. ಇದೀಗ ಲಂಕೇಶ್ ಮತ್ತು ಮಾಜಿ ಸಿಎಂ ಎಚ್ಡಿಕೆ ಭೇಟಿ ಆಗಿರುವ ಫೋಟೋಗಳನ್ನು ಅಭಿಮಾನಿಗಳು ಟ್ರೋಲ್ ಮಾಡಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿ, ಇಂದ್ರಜಿತ್ ಎಚ್ಡಿಕೆ ಭೇಟಿಯಾಗಿದ್ದಾರೆ ಎಂದು ದೂರಿದ್ದಾರೆ.
ಇಂದ್ರಜಿತ್ ಲಂಕೇಶ್ ಅವರು ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಟೀಕೆ ಮಾಡಿದ್ದು, ಎಲ್ಲಿದ್ದೀರಾ ಸುಮಲತ ಕೊರೊನಾ ಸಮಯದಲ್ಲಿ ಜನರ ಜತೆ ಇರೋದು ಬಿಟ್ಟು ಎಲ್ಲಿ ಹೋಗಿದ್ದೀಯಾ? ಕೊರೊನಾ ಸಮಯದಲ್ಲಿ ಮಂಡ್ಯ ಸ್ವಾಭಿಮಾನಿ ಜನ ಮರೆತುಹೋಗಿದ್ದೀರಾ ಎಂದು ಟೀಕೆ ಮಾಡಿದ್ದರು.