ಹೈದರಾಬಾದ್, ಜು 16 (DaijiworldNews/PY): ಸಾಲ ತೀರಿಸಲು ಹಣವಿಲ್ಲದೇ ಕಿಡ್ನಿ ಮಾರಲು ಮುಂದಾದ ದಂಪತಿ 40 ಲಕ್ಷ ಕಳೆದುಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಖೈರತಾಬಾದ್ನ ಎಂ ವೆಂಕಟೇಶ್ ಹಾಗೂ ಲಾವಣ್ಯ ಎಂಬವರು ಸ್ಟೇಷನರಿ ಅಂಗಡಿವೊಂದನ್ನು ಇಟ್ಟುಕೊಂಡಿದ್ದು, ವ್ಯಾಪಾರ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ಮಾಡಿದ್ದರು ಎನ್ನಲಾಗಿದೆ.
ಲಾಕ್ರ್ಡನ್ ಹಿನ್ನೆಲೆ ಯಾವುದೇ ಆದಾಯ ಬರುತ್ತಿರಲಿಲ್ಲ. ಹಾಗಾಗಿ 1.5 ಲಕ್ಷ ಕೋಟಿ ಸಾಲ ಮಾಡಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಹಾಗಾಗಿ ಇದರ ಸಾಲ ತೀರಿಸಲಾಗದೇ ದಂಪತಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದು, ಕಿಡ್ನಿ ಮಾರಾಟಕ್ಕಾಗಿ ಸೋಶಿಯಲ್ ಮೀಡಿಯಾದ ಮೊರೆ ಹೋಗಿದ್ದಾರೆ.
ಈ ದಂಪತಿಗೆ ಮಾರ್ಚ್ ತಿಂಗಳಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೋರ್ವನ ಪರಿಚಯವಾಗಿದ್ದು, ಆತ ಯುಕೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ, 5 ಕೋಟಿ ಕೊಡ್ಡು ಕಿಡ್ನಿ ಖರೀದಿಸುವುದಾಗಿ ನಕಲಿ ವೈದ್ಯ ನಂಬಿಸಿದ್ದಾನೆ. ಕಿಡ್ನಿ ಖರೀಸುತ್ತೇನೆ ಎಂದು ಹೇಳಿ ನೋಂದಾವಣಿ, ನಿರ್ವಹಣಾ ವೆಚ್ಚ ಸೇರಿದಂತೆ ಕರೆನ್ಸಿ ಎಕ್ಸ್ಚೆಂಜ್ ಎಂದು ಸುಮಾರು 26 ಲಕ್ಷವಾಗುತ್ತದೆ ಎಂದು ದಂಪತಿ ಬಳಿಯಿಂದ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.ಬಳಿಕ ನಿಮ್ಮನ್ನು ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಭೇಟಿ ಮಾಡುತ್ತೇನೆ ಎಂದು ಹೇಳಿ ದಂಪತಿಯನ್ನು ನಂಬಿಸಿದ್ದ.
ಬೆಂಗಳೂರಿನ ಲಾಡ್ಜ್ವೊಂದರಲ್ಲಿ ದಂಪತಿಯನ್ನು ಭೇಟಿಯಾದ ಆಫ್ರಿಕಾದ ಪ್ರಜೆಯೋರ್ವ ಅವರಿಗೆ ಸೂಟ್ಕೇಸ್ ಮೂಲಕ ಕಪ್ಪು ನೋಟುಗಳನ್ನು ತಂದಿರುವುದನ್ನು ತೋರಿಸಿದ್ದಾನೆ. ಈ ಕಪ್ಪು ನೋಟಿಗೆ ಯಾವುದೇ ಕೆಮಿಕಲ್ ಮಿಕ್ಸ್ ಮಾಡಿದಲ್ಲಿ ಅದು 2 ಸಾವಿರ ರೂ. ನೋಟಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದ್ದಾನೆ. ಬಳಿಕ ದಂಪತಿಗೆ ಕಪ್ಪು ನೋಟುಗಳನ್ನು ಕೊಟ್ಟು ಇದಕ್ಕೆ ಬೇಕಾದ ಕೆಮಿಕಲ್ ಕಳಿಸುತ್ತೇಬೆ ಎಂದು ಹೇಳಿ ಪುನಃ 14 ಲಕ್ಷ ರೂ. ಅನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಹೀಗೆ ದಂಪತಿ ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ. ಸದ್ಯ ಘಟನೆಯ ಬಗ್ಗೆ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.