ಜಮ್ಮು, ಜು.16 (DaijiworldNews/HR): ಶುಕ್ರವಾರ ಬೆಳಗ್ಗೆ ಸಾಂಬಾ ಮತ್ತು ಜಮ್ಮುವಿನ ವಿವಿಧ ಸ್ಥಳಗಳಲ್ಲಿ ಮತ್ತೆ ನಾಲ್ಕು ಶಂಕಿತ ಡ್ರೋನ್ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಗುರುವಾರ ರಾತ್ರಿ ಕೂಡ ಜಮ್ಮುವಿನ ಸಾಂಬಾ ಮತ್ತು ಹೀರಾನಗರ ಪ್ರದೇಶದ ಬಳಿ ಕನಿಷ್ಠ ಎರಡು ಡ್ರೋನ್ ಗಳು ಹಾರುತ್ತಿರುವುದನ್ನು ಗುರುತಿಸಲಾಗಿದ್ದು, ಸಶಸ್ತ್ರ ಪಡೆಗಳು ಕಾರ್ಯಾಚರಣೆ ನಡೆಸಿದ ನಂತರ ಈ ಪ್ರದೇಶದಲ್ಲಿ ಅನೇಕ ಸುತ್ತಿನ ಗುಂಡಿನ ದಾಳಿ ನಡೆಸಿತ್ತು.
ಇನ್ನು ಇಂದು ಬೆಳಿಗ್ಗೆಯೂ ಇಲ್ಲಿನ ಭಾರತೀಯ ವಾಯುಪಡೆ ನಿಲ್ದಾಣದ ಬಳಿ ಡ್ರೋನ್ ಕಂಡುಬಂದಿದೆ.
ಜಮ್ಮು ವಾಯುಪಡೆ ನಿಲ್ದಾಣದ ಮೇಲೆ ಜೂನ್ 27 ರಂದು ದಾಳಿ ನಡೆಸಲು ಎರಡು ಸ್ಫೋಟಕ ತುಂಬಿದ ಡ್ರೋನ್ಗಳನ್ನು ಬಳಸಲಾಗಿದ್ದು, ಈ ದಾಳಿಯಿಂದ ಇಬ್ಬರು ಐಎಎಫ್ ಸಿಬ್ಬಂದಿಗೆ ಸಣ್ಣ ಗಾಯಗಳಾಗಿದ್ದವು ಎನ್ನಲಾಗಿದೆ.