ಕಲಬುರ್ಗಿ, ಜು. 15(DaijiworldNews/HR): ವಿವಿಧ ಕೆಲಸಗಳಿಗಾಗಿ ಪಕ್ಷದ ಶಾಸಕರು ದೆಹಲಿಗೆ ಹೋಗುತ್ತಾರೆ ಬರುತ್ತಾರೆ. ಅವರು ಹೋದರೆ ತಪ್ಪೇನು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿದ್ದಾರೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಮುಖ್ಯಮಂತ್ರಿ ಅವರು ಅಧಿವೇಶನದ ವೇಳೆಗೆ ದೆಹಲಿಗೆ ಹೋಗುವ ಪರಿಪಾಠವಿದೆ, ಹಾಗಾಗಿ ಹೋಗುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅವರ ವಿವೇಚನೆಗೆ ಬಿಟ್ಟದ್ದು" ಎಂದಿದ್ದಾರೆ.
ಇನ್ನು "ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ. ಎಲ್ಲಾ ಕಡೆ ಲಸಿಕೆ ಇದೆ, ಇದೀಗ ಐದು ಕಂಪನಿಗಳು ಲಸಿಕೆ ನೀಡುತ್ತಿವೆ. ಡಿಸೆಂಬರ್ ನೊಳಗಾಗಿ ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ" ಎಂದರು.
ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷವಿದ್ದರೂ ಕೂಡ ಕಾಂಗ್ರೆಸ್ನಲ್ಲಿ ಈಗಲೇ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ನಡೆದಿದೆ. ಸಿ.ಎಂ. ಹುದ್ದೆಗೆ ಸಂಗೀತ ಖುರ್ಚಿ ಆಟ ಜೋರಾಗಿ ನಡೆದಿದೆ" ಎಂದು ಹೇಳಿದ್ದಾರೆ.