ನವದೆಹಲಿ,ಜು.15 (DaijiworldNews/HR): ಶತಮಾನಗಳಿಂದ ನಿರ್ಮಿಸಿದ ದೇಶವನ್ನು ಸೆಕೆಂಡುಗಳಲ್ಲಿ ಅಳಿಸಿ, ಕಷ್ಟದ ಸಮಯವನ್ನು ಭಾರತಕ್ಕೆ ತಂದದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಭಾರತ ಸರ್ಕಾರವು ವಿದೇಶ ಹಾಗೂ ರಕ್ಷಣಾ ನೀತಿಯನ್ನು ದೇಶೀಯ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದ್ದು, ನಮ್ಮ ದೇಶವನ್ನು ದುರ್ಬಲಗೊಳಿಸಿದ್ದು, ಭಾರತವು ಎಂದಿಗೂ ಇಷ್ಟೊಂದು ಕಷ್ಟದ ಸ್ಥಿತಿ ಎದುರಿಸಿರಲಿಲ್ಲ" ಎಂದಿದ್ದಾರೆ.
ಇನ್ನು ನಿರುದ್ಯೋಗ, ಬೆಲೆ ಏರಿಕೆ, ಕೊರೊನಾ ಲಸಿಕೆ ಕೊರತೆ, ರೈತರ ಪ್ರತಿಭಟನೆ ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಇದೇ ಬಿಜೆಪಿ ಸರ್ಕಾರ ದೇಶಕ್ಕೆ ತಂದಿಟ್ಟಿದ್ದು, ಶತಮಾನಗಳ ಕಾಲ ನಿರ್ಮಿಸಲಾದ ದೇಶವನ್ನು ಸೆಕೆಂಡ್ ಗಳಲ್ಲಿ ಅಳಿಸಿದ್ದಾರೆ" ಎಂದು ಹೇಳಿದ್ದಾರೆ.