ಚೆನ್ನೈ, ಜು.15 (DaijiworldNews/HR): ತಮಿಳುನಾಡಿನ ತಿರುವಳ್ಳೂರಿನಲ್ಲಿ ನದಿಯಲ್ಲಿ ಆಟವಾಡುವಾಗ ಮುಳುಗುತ್ತಿರುವ ಬಾಲಕಿಯ ರಕ್ಷಣೆಗೆ ತೆರಳಿದ ಐವರು ನೀರುಪಾಲಾಗಿರುವ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಮಹಿಳೆಯರು ನದಿಯಲ್ಲಿ ಬಟ್ಟೆ ಒಗೆಯಲು ಹೋದಾಗ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿಯೊಬ್ಬಳು ನೀರಿನಲ್ಲಿ ಸಿಲುಕಿಕೊಂಡಾಗ ಆಕೆಯ ರಕ್ಷಣೆಗೆ ತೆರಳಿದ ಐವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಸುಮತಿ (35), ಅಶ್ವಿತಾ (15), ಜೀವಿತಾ (14), ನರ್ಮಾ (12), ಜ್ಯೋತಿಲಕ್ಷ್ಮೀ (30) ಎಂದು ಗುರುತಿಸಲಾಗಿದೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು 1 ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭವಾಗಿದೆ.