ಜಮ್ಮು, ಜು.15 (DaijiworldNews/HR): ಜಮ್ಮು ಕಾಶ್ಮೀರದ ವಾಯುನೆಲೆ ಕೇಂದ್ರದಲ್ಲಿ ಮತ್ತೆ ಡ್ರೋಣ್ ಹಾರಾಟ ಕಂಡುಬಂದಿದ್ದು, ಬಿಎಸ್ಎಫ್ ಯೋಧರು ಡ್ರೋನ್ ಕಂಡ ತಕ್ಷಣ ಗುಂಡು ಹಾರಿಸಿದ್ದು, ಬಳಿಕ ಡ್ರೋಣ್ ವಾಪಸಾಗಿದೆ ಎಂದು ತಿಳಿದುಬಂದಿದೆ.
ಸಾಂಧರ್ಭಿಕ ಚಿತ್ರ
ಇತ್ತೀಚೆಗೆ ಗಡಿ ಪ್ರದೇಶದಲ್ಲಿ ಡ್ರೋನ್ ದಾಳಿ ಹೆಚ್ಚಾಗಿದ್ದು, ಅದರ ಅಪಾಯ ಹೆಚ್ಚಾಗಿರುವ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಾಲಗಿದ್ದು, ಜಮ್ಮು ಕಾಶ್ಮೀರದ ಪೂಂಚ್ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇನ್ನು ಮಂಗಳವಾರ ಅರ್ನಿಯಾ ಸೆಕ್ಟರ್ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಪತ್ತೆಯಾಗಿದ್ದು, ತಡರಾತ್ರಿ ಕಾಣಿಸಿಕೊಂಡ ಡ್ರೋನ್ ಮೇಲೆ ಬಿಎಸ್ಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು.
ಡ್ರೋನ್ ಕಂಡ ತಕ್ಷಣ ಬಿಎಸ್ಎಫ್ ಯೋಧರು ಡ್ರೋನ್ ವಿರುದ್ಧ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಡ್ರೋನ್ ನಿರ್ವಾಹಕ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದು, ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂತಿರುಗಿದೆ ಎಂದು ವರದಿ ತಿಳಿಸಿದೆ.