ನವದೆಹಲಿ, ಜು 14 (DaijiworldNews/PY): ಟೋಕಿಯೋ ಒಲಿಂಪಿಕ್ಸ್ಗೆ ಹೊರಡಲು ಸಜ್ಜಾಗಿರುವ ಭಾರತದ ಪ್ರಮುಖ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಅವರು ವರ್ಚುವಲ್ ವಿಡಿಯೋ ಮೂಲಕ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರ ಜೊತೆ ಮೋದಿ ಅವರು ಮಾತಕತೆ ನಡೆಸಿದ್ದಾರೆ. ಈ ಸಂದರ್ಭ ಐಸ್ಕ್ರೀಂ ಎಂದರೆ ಪಿವಿ ಸಿಂಧು ಅವರಿಗೆ ಇಷ್ಟ ಎಂದು ತಿಳಿದ ಪ್ರಧಾನಿ, "ಒಲಿಂಪಿಕ್ಸ್ ಮುಗಿದ ಬಳಿಕ ಒಟ್ಟಿಗೆ ಐಸ್ಕ್ರೀಂ ತಿನ್ನೋಣ" ಎಂದಿದ್ದಾರೆ.
ಒಲಿಂಪಿಕ್ಸ್ ಸಿದ್ದತೆಯಲ್ಲಿರುವ ಸಿಂಧು ಅವರು ಡಯೆಟ್ ದೃಷ್ಟಿಯಿಂದ ಸದ್ಯಕ್ಕೆ ಐಸ್ಕ್ರಿಂ ತ್ಯಜಿಸಿರುವುದಾಗಿ ಹೇಳಿದ್ದಾರೆ. "ನಿಮ್ಮ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಒಟ್ಟಿಗೆ ಐಸ್ಕ್ರೀ ತಿನ್ನೋಣ. ಒಲಿಂಪಿಕ್ಸ್ನಲ್ಲಿ ಯಶಸ್ವಿ ಪ್ರದರ್ಶನ ತೋರಿ" ಎಂದು ಪ್ರಧಾನಿ ಮೋದಿ ಸಿಂಧು ಅವರಿಗೆ ಶುಭ ಹಾರೈಸಿದ್ದಾರೆ.
ಬಾಕ್ಸರ್ ಮೇರಿ ಕೋಮ್ ಜೊತೆ ಮಾತನಾಡಿದ ಪ್ರಧಾನಿ ಮೋದಿ, ನೀವು ಇಡೀ ದೇಶಕ್ಕೆ ಸ್ಪೂರ್ತಿಯಾಗಿದ್ದು, ನಿಮ್ಮ ನೆಚ್ಚಿನ ಬಾಕ್ಸರ್ ಯಾರು? ಎಂದು ಕೇಳಿದ್ದಾರೆ. ಇದಕ್ಕೆ ಮೊಹಮ್ಮದ್ ಅಲಿ ಅವರೇ ಸ್ಪೂರ್ತಿ. ಅವರನ್ನು ನೋಡಿ ಸ್ಪೂರ್ತಿಗೊಂಡು ಬಾಕ್ಸಿಂಗ್ ಆಡಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಜಾವಲಿನ್ ಪಟು ನೀರಜ್ ಚೋಪ್ರಾ, ದ್ಯುತಿ ಚಾಂದ್, ಆಶೀಸ್ ಕುಮಾರ್, ಸೌರಭ್ ಚೌದರಿ, ಶರತ್ ಕಮಲ್, ಮನಿತಾ ಭಾತ್ರಾ, ವಿನೇಶ್ ಫೋಗಟ್, ಸಾಜನ್ ಪ್ರಕಾಶ್, ಮನ್ ಪ್ರೀತ್ ಸಿಂಗ್, ಆರ್ಚರಿ ಪಟು ದೀಪಿಕಾ ಕುಮಾರಿ, ಪ್ರವೀಣ್ಜಾಧವ್ ಜೊತೆ ಮಾತುಕತೆ ನಡೆಸಿದ್ದಾರೆ.