ಲಕ್ನೋ, ಜು 14 (DaijiworldNews/PY): ಕೊರೊನಾ ನಿರ್ವಹಣೆಯ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿರುವ ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ, "ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಸಿಎಂ ಅವರು ತಮ್ಮ ದೇಶಕ್ಕೆ ಸಹಾಯ ಮಾಡಬಹುದೇ?" ಎಂದು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕ್ರೇಗ್ ಕೆಲ್ಲಿ, "ಉತ್ತರ ಪ್ರದೇಶ ಹಾಗೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಮರ್ಥ ಆಡಳಿತದೊಂದಿಗೆ ಕೊರೊನಾ ಸೋಂಕನ್ನು ಸಮರ್ಥವಾಗಿ ಎದುರಿಸಿದ್ದಾರೆ. ಉತ್ತರಪ್ರದೇಶವು, ಆರೋಗ್ಯ ಕಾರ್ಯಕರ್ತರು, ರೋಗಿಗಳು ಹಾಗೂ ಸೋಂಕಿತರ ಸುರಕ್ಷತೆಗಾಗಿ ಐವರ್ಮೆಕ್ಟಿನ್ ಪರಿಚಯಿಸಿರುವುದು ಅದ್ಭುತವಾಗಿದೆ" ಎಂದು ಶ್ಲಾಘಿಸಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ, ನಮ್ಮ ದೇಶದಲ್ಲಿ ಸೃಷ್ಟಿಯಾಗಿರುವ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸಲು ಯೋಗಿ ಆದಿತ್ಯನಾಥ್ ಅವರ ನೆರವು ಕೋರಿದ್ದಾರೆ.
ಕಳೆದ ತಿಂಗಳು ಪ್ರಧಾನ ಮೋದಿ ಅವರು ಯೋಗಿ ಆದಿತ್ಯನಾಥ್ ಅವರು ಕೈಗೊಂಡ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಹಾಗೂ ಕಾನೂನು ಸೇವೆ ಸೇರಿದಂತೆ ಇತರೆ ಸೇವೆಗಳನ್ನು ನೀಡಲು ಸಹಾಯವಾಣಿ ಸೌಲಭ್ಯವನ್ನು ನೀಡಲಿ ಉತ್ತರಪ್ರದೇಶ ಸರ್ಕಾರ ಕೈಗೊಂಡ ಕ್ರಮಕ್ಕೆ ಶ್ಲಾಘಿಸಿದ್ದರು.