ಮಂಗಳೂರು, ಜು14 (DaijiworldNews/MS): ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ನೋಟು ಮುದ್ರಾಣಾಲಯದಿಂದ 500 ರೂಪಾಯಿ ಮೌಲ್ಯದ ನೋಟಿನ 10 ಬಂಡಲ್ ಗಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ಸಾಕಷ್ಟು ಬಿಗಿ ಭದ್ರತೆ ಇರುವ ಕರೆನ್ಸಿ ನೋಟು ಪ್ರೆಸ್ ನಿಂದ ಕಳ್ಳತನ ನಡೆದಿರುವುದು ನಿಜಕ್ಕೂಅಘಾತಕಾರಿ ವಿಚಾರವಾಗಿದೆ.
ಕರೆನ್ಸಿ ನೋಟು ಪ್ರೆಸ್ ನಿಂದ 500 ರೂಪಾಯಿ ಮುಖಬೆಲೆಯ 10 ಬಂಡಲ್ ನಲ್ಲಿ ಒಟ್ಟು 5 ಲಕ್ಷ ರೂ. ಮೌಲ್ಯದ ನೋಟುಗಳು ನಾಪತ್ತೆಯಾಗಿವೆ. ದಿನದ 24 ಗಂಟೆಯೂ ಉನ್ನತ ಮಟ್ಟದ ಭದ್ರತೆ ಇರುವ ಸಿ ಎನ್ ಪಿ ಯಿಂದ ನೋಟುಗಳು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ನಾಸಿಕ್ ನಲ್ಲಿ ವರ್ಷಕ್ಕೆ 200 ರಿಂದ 250 ಕೋಟಿ ರೂ. ಮೌಲ್ಯದ ನಗದು ಮುದ್ರಣವಾಗುತ್ತದೆ.
ಕಳೆದ ಐದು ತಿಂಗಳುಗಳಿಂದ ನೋಟು ಕಾಣೆಯಾಗುತ್ತಿದೆ ಎಂದು ಗೊತ್ತಾದ ತಕ್ಷಣ ಆಂತರಿಕ ತನಿಖೆ ನಡೆಸಲಾಗುತ್ತಿದೆ. ಇದರೊಂದಿಗೆ ಇಂಡಿಯಾ ಸೆಕ್ಯುರಿಟಿ ಪ್ರೆಸ್ ನ ವ್ಯವಸ್ಥಾಪಕ ಅಧಿಕಾರಿ ನಾಸಿಕ್ ಉಪನಗರ ಠಾಣೆಯ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.