ಭಟ್ಕಳ, ಜು 13 (DaijiworldNews/MS): ಒಂದೇ ಗಂಟೆಯ ಅವಧಿಯಲ್ಲಿ ತಂದೆ ಹಾಗೂ ಮಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಮಾರುಕೇರಿಯಲ್ಲಿ ನಡೆದಿದೆ. ಮೃತರನ್ನು ಮಾರುಕೇರಿ ಹೆಜ್ಜಿಲು ನಿವಾಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ರಾಮ ಗೊಂಡ (15) ಹಾಗೂ ತಂದೆ ರಾಮ ಸುಕ್ರ ಗೊಂಡ (46) ಎಂದು ಗುರುತಿಸಲಾಗಿದೆ.
ಕಾವ್ಯಾ ರಾಮ ಗೊಂಡ ಉಡುಪಿಯ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಾವ್ಯಾ ರಾಮ ಗೊಂಡ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಕಾವ್ಯಾ ರಾಮ ಗೊಂಡ ಆರೋಗ್ಯದಲ್ಲಿ ಏರುಪೇರಾಗಿ, ಸೋಮವಾರ ಬೆಳಿಗ್ಗೆ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕಾವ್ಯಾ ಮೃತಪಟ್ಟಳು.
ಕಾವ್ಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಮನೆಯಲ್ಲೇ ಹೃದಯಾಘಾತಕ್ಕೀಡಾದರು. ತಂದೆ, ಮಗಳ ಸಾವಿನ ಸುದ್ದಿ ತಿಳಿದ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.