ಗುವಾಹಟಿ, ಜು.13 (DaijiworldNews/HR): ಅರುಣಾಚಲ ಪ್ರದೇಶದ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಜೈಲಿನ ಸಿಬ್ಬಂದಿಗೆ ಹಲ್ಲೆ ನಡೆಸಿ ಅವರ ಮೇಲೆ ಮೆಣಸಿನ ಪುಡಿ ಎರಚಿ ಏಳು ಮಂದಿ ಖದೀಮರು ಜೈಲಿನಿಂದ ಪರಾರಿಯಾದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಜೈಲಿನಿಂದ ಪರಾರಿಯಾದ ಖೈದಿಗಳನ್ನು ಅಭಿಜಿತ್ ಗೊಗೋಯ್, ತಾರೊ ಹಮಾಮ್, ಕಲೋಮ್ ಅಪಾಂಗ್, ತಲುಮ್ ಪನ್ಯಾಂಗ್, ಸುಭಾಶ್ ಮೊಂಡಲ್, ರಾಜ ತಯೆಂಗ್ ಮತ್ತು ದನಿ ಗಮ್ಲಿನಾ ಎಂದು ಗುರುತಿಸಲಾಗಿದೆ.
ಈ ಏಳು ಖದೀಮರು ಜೈಲಿನಿಂದ ಪರಾರಿಯಾಗಲು ಮೊದಲೇ ಯೋಜನೆ ರೂಪಿಸಿದ್ದು, ಅದಕ್ಕಾಗಿ ಮೆಣಸಿನ ಹುಡಿ ಮತ್ತು ಉಪ್ಪನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
ಇನ್ನು ಈ ಘಟನೆಯಲ್ಲಿ ಐದು ಮಂದಿ ಜೈಲು ಸಿಬ್ಬಂದಿಗೆ ಗಾಯಗಳಾಗಿದ್ದು, ಓರ್ವನ ಮೊಬೈಲ್ ಫೋನನ್ನು ಕೂಡಾ ಖೈದಿಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದ್ದು, ಸದ್ಯ ಪರಾರಿಯಾಗಿರುವ ಖೈದಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.