ನವದೆಹಲಿ, ಜು. 12 (DaijiworldNews/HR): ದೇಶದಲ್ಲಿ ಕೇಂದ್ರ ಸಚಿವರ ಸಂಖ್ಯೆ ಏರಿಕೆಯಾಗಿದೆ ಹೊರತು ಕೊರೊನಾ ಲಸಿಕೆ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಕೇಂದ್ರ ಸಚಿವರ ಸಂಖ್ಯೆ ಏರಿಕೆಯಾಗಿದೆ ಹೊರತು ಕೊರೊನಾ ಲಸಿಕೆ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಬರೆದುಕೊಂಡು ಭಾರತದ ಲಸಿಕಾ ಅಭಿಯಾನ ಕುರಿತಾದ ಒಂದು ಚಾರ್ಟ್ ಅನ್ನೂ ಶೇರ್ ಮಾಡಿದ್ದಾರೆ.
ಇನ್ನು ರಾಹುಲ್ ಪೋಸ್ಟ್ ಮಾಡಿದ ಈ ಚಾರ್ಟ್ ಪ್ರಕಾರ ಮೂರನೇ ಅಲೆ ತಡೆಯಬೇಕಿದ್ದರೆ ದೇಶದ ಶೇ60ರಷ್ಟು ಜನಸಂಖ್ಯೆಯನ್ನು ಡಿಸೆಂಬರ್ ಒಳಗೆ ಲಸಿಕೆ ನೀಡಬೇಕಿದ್ದು, ಇದಕ್ಕಾಗಿ ಪ್ರತಿ ದಿನ ಸರಾಸರಿ 8.8 ಮಿಲಿಯನ್ ಜನರಿಗೆ ಲಸಿಕೆ ನೀಡಬೇಕಿದೆ ಎಂದು ವಿವರಿಸಲಾಗಿದೆ.