ನವದೆಹಲಿ, ಜು 12 (DaijiworldNews/PY): ಇಸ್ಲಾಮೋಫೋಬಿಕ್ ಪೋಸ್ಟ್ಗಳು ಟ್ವಿಟರ್ನಲ್ಲಿ ಪ್ರಕಟವಾಗುತ್ತಿರುವ ಬಗ್ಗೆ ಸಿಬಿಐ ಅಥವಾ ಎನ್ಐಎ ತನಿಖೆ ನಡೆಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಕಳೆದ ವರ್ಷ ಕೊರೊನಾ ಆರಂಭವಾದ ಸಂದರ್ಭ ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ನ ಬೃಹತ್ ಸಮಾವೇಶದ ಬಳಿಕ ಟ್ವಿಟರ್ನಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ಗಳು ಪ್ರಕಟವಾಗಿದ್ದವು. ಹಾಗಾಗಿ ಟ್ವಿಟ್ರ್ ವಿರುದ್ದ ಸಿಬಿಐ ಅಥವಾ ಎನ್ಐಎ ತನಿಖೆಯಾಗಬೇಕು, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ಗಳು ಹಾಗೂ ಯಾವುದೇ ಧರ್ಮ ಸಮುದಾಯದ ವಿರುದ್ದ ದ್ವೇಷ ಹರಡುವುದರ ವಿರುದ್ದ ಐಟಿ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ವಕೀಲ ಖಾಜ ಐಜಾಜುದ್ದೀನ್ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶ ಎನ್ ವಿ ರಮಣ ಹಾಗೂ ನ್ಯಾ. ಎ.ಎಸ್ ಬೋಪಣ್ಣ ಅವರಿದ್ದ ಪೀಠ, "ಕೇಂದ್ರ ಸರ್ಕಾರದ ಹೊಸ ಐಟಿ ಕಾನೂನುಗಳ ಬಗ್ಗೆ ನೀವು ಅಧ್ಯಯನ ಮಾಡಿದ್ದೀರಾ?" ಎಂದು ಕೇಳಿದೆ.
ಈ ವೇಳೆ ಐಜಾಜುದ್ದೀನ್ ಅವರು ಹೊಸ ಐಟಿ ಕಾನೂನನ್ನು ಓದಲು ಆರಂಭಿಸಿದ ವೇಳೆ, "ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗುತ್ತಿದೆ. ಆ ವೇಳೆಗೆ ಅರ್ಜಿದಾರರು ಹೊಸ ಕಾನೂನಿನ ಬಗ್ಗೆ ಅಧ್ಯಯನ ಮಾಡಿ ತಯಾರಾಗಿ ಬರಬೇಕು" ಎಂದಿದೆ.
ಈ ಮೊದಲು ಐಜಾಜುದ್ದೀನ್ ಅವರು ತಮ್ಮ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ನಲ್ಲಿ ಸಲ್ಲಿಸಿದ್ದರು. ಏಪ್ರಿಲ್ 22ರಂದು ತೆಲಂಗಾಣ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಹಾಗೂ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ನ ಮೊರೆ ಹೋಗಬಹುದು ಎಂದಿತ್ತು.
ಮೊದಲಿಗೆ ಐಜಾಜುದ್ದೀನ್ ಅವರು ತಮ್ಮ ಅರ್ಜಿಯನ್ನು ತಲಂಗಾಣ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದರು. ಏ.22 ರಂದು ತೆಲಂಗಾಣ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಹಾಗೂ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದೆಂದು ಸೂಚಿಸಿತ್ತು.