ಚೆನ್ನೈ, ಜು 12 (DaijiworldNews/MS): ತಮಿಳು ನಟ ರಜನಿಕಾಂತ್ ಅವರು "ತಮಗೆ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಘೋಷಿಸಿ ತಮ್ಮ ಪಕ್ಷವಾದ ರಜಿನಿ ಮಕ್ಕಲ್ ಮಂದಿರ ಪಕ್ಷವನ್ನು ವಿಸರ್ಜಿಸಿದ್ದಾರೆ. ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸಲು ಅವರು ತಮ್ಮ ರಜನಿ ಮಕ್ಕಳ್ ಮಂದ್ರಾಮ್ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಭೇಟಿಯಾದ ನಂತರ ಸೋಮವಾರ ಈ ಪ್ರಕಟಣೆ ಹೊರಡಿಸಿದ್ದಾರೆ.
ವೈದ್ಯಕೀಯ ಆರೋಗ್ಯ ತಪಾಸಣೆ ಮುಗಿಸಿ ಅಮೆರಿಕದಿಂದ ಚೆನ್ನೈಗೆ ಮರಳಿದ ನಟ ರಜನಿಕಾಂತ್ ಸೋಮವಾರ ತಮ್ಮ ಪೋಯಸ್ ಗಾರ್ಡನ್ ನಿವಾಸದ ಹೊರಗೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್ನು ಮುಂದೆ ಜನಿ ಮಕ್ಕಲ್ ಮಂದಿರ ಪಕ್ಷವೂ ಕೇವಲ "ರಜನಿಕಾಂತ್ ಫ್ಯಾನ್ಸ್ ಕ್ಲಬ್ " ಆಗಿ ಕಾರ್ಯನಿರ್ವಹಿಸಲಿದೆ. ಸಮಾಜದ ಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳಲು ಈ ವೇದಿಕೆ ಮುಂದೆ ರಜಿನಿ ರಾಸಿಗರ್ ನರ್ಪಾನಿ ಮಂದಿರಂ ಆಗಿ ಕಾರ್ಯನಿರ್ವಹಿಸುತ್ತದೆ. ಅನಿರೀಕ್ಷಿತ ಸಂದರ್ಭಗಳಿಂದಾಗಿ, ನಾವು ಬಯಸಿದ್ದನ್ನು ಸಾಧಿಸಲು ನಮಗೆ ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ನನ್ನಲ್ಲಿಲ್ಲ. ಆದ್ದರಿಂದ, ರಜಿನಿ ಮಕ್ಕಲ್ ಮಂದಿರವನ್ನು ವಿಸರ್ಜಿಸಲಾಗುವುದು ಮತ್ತು ಅದು ಮೊದಲಿನಂತೆ ಕಲ್ಯಾಣ ಚಟುವಟಿಕೆಗಳನ್ನು ನಡೆಸಲು ರಜಿನಿ ರಾಸಿಗರ್ ಮಂದಿರವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಹೇಳಿದ್ದಾರೆ.
ರಜಿನಿ ಮಕ್ಕಲ್ ಮಂದ್ರಾಮ್ ಪಕ್ಷವೂ ಈ ಹಿಂದೆ ನಟ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಾಗಿಲು ಎಂದೇ ಬಿಂಬಿತವಾಗಿತ್ತು. ಕೋವಿಡ್, ಚುನಾವಣೆಗಳು , ಚಿತ್ರೀಕರಣ ಮತ್ತು ಯುಎಸ್ ನಲ್ಲಿ ವೈದ್ಯಕೀಯ ತಪಾಸಣೆಯಿಂದಾಗಿ ಮಕ್ಕಲ್ ಮಂದ್ರಾಮ್ ಪದಾಧಿಕಾರಿಗಳನ್ನು ಅಥವಾ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.